ETV Bharat / sitara

ಕೋವಿಡ್​ -19 ನಿಂದ ಸಂಕಷ್ಟಕ್ಕೀಡಾದವರಿಗೆ ನೆರವು... ವಿಶೇಷ ಮಾಸ್ಕ್​ ಬಿಡುಗಡೆ ಮಾಡಿದ ಪಾಪ್​ ಸಿಂಗರ್ಸ್​​

ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಪಾಪ್​ ಗಾಯಕರು ಮುಂದಾಗಿದ್ದಾರೆ. ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಪಾಪ್​ ಸಿಂಗರ್ಸ್​ ಈ ನಿರ್ಧರಿಸಿದ್ದು, ವಿಶೇಷ ಮಾಸ್ಕ್​ ಬಿಡುಗಡೆ ಮಾಡಿದ್ದಾರೆ. ಈ ಮಾಸ್ಕ್​ವೊಂದರ ಬೆಲೆ 15 ಅಮೆರಿಕನ್​ ಡಾಲರ್​ ಆಗಿದೆ.

author img

By

Published : Apr 26, 2020, 12:08 PM IST

ಪಾಪ್​ ಸಿಂಗರ್ಸ್​​
ಪಾಪ್​ ಸಿಂಗರ್ಸ್​​

ಲಾಸ್​ ಏಂಜಲೀಸ್: ಕೋವಿಡ್​ 19ನಿಂದ ತೊಂದರೆಗೊಳಗಾದವರಿಗೆ ನೆರವಾಗಲು ಪಾಪ್​ ಸಂಗೀತಗಾರರಾದ ಬಿಲ್ಲಿ ಎಲಿಶ್​, ಅರಿಯಾನ್​ ಗ್ರಾಂಡ್​, ಜಸ್ಟಿನ್​ ಬೈಬರ್​, ದಿ ವೀಕೆಂಡ್​ ಹಾಗೂ ದಿ ರೋಲಿಂಗ್​ ಸ್ಟೋನ್ಸ್​ ಬ್ಯಾಂಡ್​ ತಂಡದವರು ತಮ್ಮದೇ ಸಿಗ್ನೇಚರ್​ವುಳ್ಳ ಬಟ್ಟೆಯಿಂದ ತಯಾರಿಸಿದ ಮುಖದ ಮಾಸ್ಕ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಪಾಪ್​ ಸಿಂಗರ್​ಗಳು ಈ ನಿರ್ಧಾರ ಮಾಡಿದ್ದು, ಪ್ರತಿಯೊಂದು ಮಾಸ್ಕ್​ನ ಬೆಲೆ 15 ಅಮೆರಿಕನ್​ ಡಾಲರ್​ ಆಗಿದೆ.

ಅರಿಯಾನ್​ ಗ್ರ್ಯಾಂಡ್​ ಅವರ ಮುಖವಾಡವ ಕಣ್ಣೀರಿನ ಡ್ರಾಫ್ ಸೂಚಿಸುವ​ ಚಿತ್ರ, ಎಲಿಶ್​ ಬಿಡುಗಡೆ ಮಾಡಿರುವ ಮಾಸ್ಕ್​ನಲ್ಲಿ ಹಸಿರು ಬಣ್ಣದಲ್ಲಿ ಅವರ ಬ್ಲೋಶ್​ ಲೋಗೊ ಹಾಗೂ ರೋಲಿಂಗ್​ ಸ್ಟೋನ್ಸ್​ ಮಾಸ್ಕ್​ನಲ್ಲಿ ಅದರ ಸಾಂಪ್ರದಾಯಿಕ ನಾಲಿಗೆ ಮತ್ತು ತುಟಿಗಳ ಲೋಗೋವನ್ನು ಒಳಗೊಂಡಿದೆ.

ಇನ್ನು, ಜಸ್ಟಿನ್​ ಬೈಬರ್​ ಮಾಸ್ಕ್​ ಅವರ ಗ್ರಾಫಿಟಿ ಸ್ಟೈಲ್​ನ ಅಕ್ಷರಗಳನ್ನು ಹೊಂದಿದೆ. ವೀಕೆಂಡ್​ರ್​ ಮಾಸ್ಕ್​ನ ಮುಂಭಾಗದಲ್ಲಿ XO ಬರೆದಿದ್ದು, ಇದನ್ನು ಹೃದಯಾಕಾರದಲ್ಲಿ ಅಲಂಕರಿಸಲಾಗಿದೆ.

ಏತನ್ಮಧ್ಯೆ ಕೊರೊನಾ ವೈರಸ್​ ಸಾಂಕ್ರಾಮಿಕ ಸಮಯದಲ್ಲಿ ಜವಾಬ್ದಾರಿ ತೆಗೆದುಕೊಳ್ಳಿ ಎಂದು ಎಲಿಶ್​ ತಮ್ಮ ಇನ್ಸ್ಟಾಗ್ರಾಮ್​ ಮೂಲಕ kರೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.