ಖಾಸಗಿ ಕನ್ನಡ ವಾಹಿನಿಯ ಸಂಗೀತ ಕಾರ್ಯಕ್ರಮದ ಜೂರಿ ಮೆಂಬರ್ಗೆ ಕೊರೊನಾ ಪಾಸಿಟಿವ್ ಕಾಣಿಸಿ ಕೊಂಡಿದೆ. ಗಾಯಕಿ ಕಂ ಸಂಗೀತ ನಿರ್ದೇಶಕಿಯಾಗಿರುವ ಜೂರಿ ಮೆಂಬರ್ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಶೇಷ ಅಂದ್ರೆ ಕೊರೊನಾಗೆ ಚಿಕಿತ್ಸೆ ಪಡೆಯಲು ದಾಖಲಾಗಿರುವ ಈ ಗಾಯಕಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಾಡು ಹಾಡುವ ಮೂಲಕ ಸಮಯ ಕಳೆಯುವುದರ ಜೊತೆಗೆ, ಜೊತೆ ಇರುವ ರೋಗಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.
ಸಹೋದರನಿಗೆ ವಿಡಿಯೋ ಕಾಲ್ ಮಾಡಿ, ಕೀ ಬೋರ್ಡ್ ನುಡಿಸುವಂತೆ ಹೇಳಿ ಗಾಯಕಿ ಆಸ್ಪತ್ರೆಯಲ್ಲಿ ಹಾಡುವ ಮೂಲಕ ಟೈಂಪಾಸ್ ಮಾಡ್ತಿದ್ದಾರೆ. ಐದು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ಗಾಯಕಿ ಅಮ್ಮನಿಗೆ ಕೊರೊನಾ ಸೊಂಕು ತಗುಲಿದ ಹಿನ್ನೆಲೆಯಲ್ಲಿಅಸ್ಪತ್ರೆಯ ಬಳಿ ಉಳಿದು ಕೊಳ್ಳಲು ಗಾಯಕಿ ವೈದ್ಯರ ಅನುಮತಿ ಕೇಳಿದ್ದಾರೆ. ಆ ವೇಳೆ ವೈದ್ಯರು ಅಸ್ಪತ್ರೆ ಬಳಿ ಉಳಿಯ ಬೇಕಾದ್ರೆ ಕೊರೊನಾ ಟೆಸ್ಟ್ ಮಾಡಿಸಿ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಕೋವಿಡ್ ಟೆಸ್ಟ್ ಮಾಡಿಸಿದಾಗ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗಿದೆ.
ಹೀಗಾಗಿ ಐದು ದಿನಗಳಿಂದ ಈ ಗಾಯಕಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವದರ ಜೊತೆಹಾಡು ಹಾಡಿ ರೋಗಿಗಳಲ್ಲಿ ಹೊಸ ಚೈತನ್ಯ ತುಂಬುತಿದ್ದಾರೆ.