ETV Bharat / sitara

Madagaja trailer release.. ನಮ್ಮ Heartbeat ಇರೋವರೆಗೂ ಅಪ್ಪು ಇರುತ್ತಾರೆ, ಸಾಧಕನಿಗೆ ಸಾವು ಅಂತ್ಯವಲ್ಲ.. ಸಿಎಂ ಬೊಮ್ಮಾಯಿ - ಮದಗಜ ಟ್ರೇಲರ್ ಬಿಡುಗಡೆ

ಸಾಧಕರು ಸಣ್ಣ ವಯಸ್ಸಿನಲ್ಲೇ ಲೋಕ ಬಿಡ್ತಾರೆ. ನಮ್ಮ ಅಪ್ಪು ಹೃದಯಗಳಲ್ಲಿ ಚಿರಸ್ಥಾಯಿ. ನಮ್ಮ ಹಾರ್ಟ್ ಬೀಟ್ ಇರೋವರೆಗೂ ಅಪ್ಪು ಇರುತ್ತಾರೆ. ಸಾಧಕನಿಗೆ ಸಾವು ಅಂತ್ಯವಲ್ಲ. ಆ ಶ್ರೇಣಿಗೆ ಪುನೀತ್ ಸೇರಿಕೊಳ್ತಾರೆ ಎಂದು ಅಗಲಿದ ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್ ಅವರನ್ನು ನೆನೆದರು..

Madagaja trailer release
ಸಿಎಂ ಬೊಮ್ಮಾಯಿ
author img

By

Published : Nov 19, 2021, 8:45 PM IST

ಮದಗಜ (Madagaja) ಸಿನಿಮಾ ಟ್ರೇಲರ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದ್ದಾರೆ. ಇಂದು ಬಿಡುಗಡೆಯಾದ ಮದಗಜ ಟ್ರೇಲರ್​ (Madagaja Trailer) ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಮದಗಜ ಟ್ರೇಲರ್​ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಶ್ರೀಮುರಳಿಗೆ ಆಲ್ ದಿ ಬೆಸ್ಟ್ ಹೇಳಿದರು. ಟ್ರೇಲರ್ ಇಷ್ಟು ಅದ್ಭುತವಾಗಿದೆ ಅಂದ್ರೆ ಸಿನಿಮಾನೂ ಚೆನ್ನಾಗಿರುತ್ತೆ. ಶ್ರೀಮುರಳಿ ಹಾಲಿವುಡ್ ಹೀರೋ ಆಗಿದ್ದಾರೆ. ಒಬ್ಬ ವ್ಯಕ್ತಿಗೆ ವಯಸ್ಸು ಮುಖ್ಯವಲ್ಲ, ಸಾಧನೆ ಮುಖ್ಯ ಎಂದು ಹೇಳಿದರು.

ಸಾಧಕರು ಸಣ್ಣ ವಯಸ್ಸಿನಲ್ಲೇ ಲೋಕ ಬಿಡ್ತಾರೆ. ನಮ್ಮ ಅಪ್ಪು ಹೃದಯಗಳಲ್ಲಿ ಚಿರಸ್ಥಾಯಿ. ನಮ್ಮ ಹಾರ್ಟ್ ಬೀಟ್ ಇರೋವರೆಗೂ ಅಪ್ಪು ಇರುತ್ತಾರೆ. ಸಾಧಕನಿಗೆ ಸಾವು ಅಂತ್ಯವಲ್ಲ. ಆ ಶ್ರೇಣಿಗೆ ಪುನೀತ್ ಸೇರಿಕೊಳ್ತಾರೆ ಎಂದು ಅಗಲಿದ ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್ ಅವರನ್ನು ನೆನೆದರು.

ಇದೇ ವೇಳೆ ಮದಗಜ ಚಿತ್ರತಂಡದ ವತಿಯಿಂದ ಮುಖ್ಯಮಂತ್ರಿಗಳಿಗೆ ನಿರ್ಮಾಪಕ ಉಮಾಪತಿ ಗೌಡ ನೆರೆ ಪರಿಹಾರ ನಿಧಿಗೆ ₹11 ಲಕ್ಷ ಚೆಕ್ ಹಸ್ತಾಂತರಿಸಿದರು.

ಓದಿ: 'ರಾಣ' ಚಿತ್ರದಲ್ಲಿ ಹೆಜ್ಜೆ ಹಾಕಲಿರುವ ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗ್ಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.