ಕೊರೊನಾದಿಂದ ಕಷ್ಟದಲ್ಲಿರುವ, ಕೂಲಿ ಕಾರ್ಮಿಕರು ಹಾಗು ಚಿತ್ರರಂಗದ ಪೋಷಕ ಕಲಾವಿದರ ಸಹಾಯಕ್ಕೆ ಚಿತ್ರರಂಗದಲ್ಲಿ ಕೆಲ ತಾರೆಯರು ಸಹಾಯ ಮಾಡುತ್ತಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಕೂಡ ಕನ್ನಡ ಚಿತ್ರರಂಗ ಕಾರ್ಮಿಕ ಸಹಾಯಕ್ಕೆ ಬಂದಿದ್ದಾರೆ.
ಸುಮಾರು 3 ಸಾವಿರಕ್ಕೂ ಹೆಚ್ಚಿರುವ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ರಾಕಿಂಗ್ ಸ್ಟಾರ್ ಯಶ್ ತಲಾ 5 ಸಾವಿರ ರೂ.ಗಳನ್ನು ಚಿತ್ರರಂಗದ ಆಯಾ ಸಂಘಗಳ ಅಧ್ಯಕ್ಷರ ಮೂಲಕ ಕಾರ್ಮಿಕರ ಖಾತೆಗೆ ಹಾಕಿದ್ದಾರೆ.
ಹಿರಿಯ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್, ಕಲಾವಿದರಾದ, ಗಣೇಶ್, ಪುಷ್ಪ ಲತಾ, ಹಾಗೂ ಕನ್ನಡ ಚಲನಚಿತ್ರ ನಿರ್ಮಾಣ ಹಾಗು ನಿರ್ವಾಹಕರ ಸಂಘದ ಖಜಾಂಚಿ ಮಲ್ಲಿಕಾರ್ಜುನ್ ಹಾಗು ನೃತ್ಯ ಕಲಾವಿದರ ಪರವಾಗಿ ಪೈವ್ ಸ್ಟಾರ್ ಗಣೇಶ್ ಸೇರಿದಂತೆ ಸಾಕಷ್ಟು ಕಾರ್ಮಿಕರ ಖಾತೆಗೆ ಯಶ್ ಹಣವನ್ನ ಹಾಕಿದ್ದಾರೆ.
ಈ ಸಹಾಯಕ್ಕೆ ಕನ್ನಡ ಚಿತ್ರರಂಗದ ಕಾರ್ಮಿಕರು ಮನದುಂಬಿ ಕೃತಜ್ಞತೆ ಹೇಳಿದ್ದಾರೆ.