ETV Bharat / sitara

ಚಿರು ಹಾಗೂ ಮೇಘನಾ ರಾಜ್ ಮಗನ ತೊದಲ ಮಾತಿಗೆ ಅಭಿಮಾನಿಗಳು ಫಿದಾ - ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳು

ದಿವಂಗತ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮಗ ರಾಯನ್ ರಾಜ್ ಸರ್ಜಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡುತ್ತಿದ್ದಾನೆ. ತೊದಲ ಮಾತಿನ ಮೂಲಕ ಚಿರು - ಮೇಘನಾ ಅಭಿಮಾನಿಗಳಿಗೆ ಖುಷಿ ನೀಡಿದ್ದಾನೆ.

Rayan Raj Sarja
ರಾಯನ್ ರಾಜ್ ಸರ್ಜಾ
author img

By

Published : Sep 24, 2021, 11:43 AM IST

Updated : Sep 24, 2021, 2:07 PM IST

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರಂತೆ, ಅವರ ಮಕ್ಕಳು ಕೂಡ ಸ್ಟಾರ್ ಕಿಡ್​ಗಳಾಗಿ ಗಮನ ಸೆಳೆಯುವ ಟ್ರೆಂಡ್ ಈಗಾಗಲೇ ಶುರುವಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳು, ನಟಿ ಶ್ವೇತಾ ಶ್ರೀವಾತ್ಸವ್ ಮಗಳು, ಅನು ಪ್ರಭಾಕರ್ ಮಗಳು ಒಂದಲ್ಲ ಒಂದು ವಿಷಯಕ್ಕೆ ಗಮನ ಸೆಳೆಯುತ್ತಿರುತ್ತಾರೆ.

ಈ ಸ್ಟಾರ್ಸ್ ಕಿಡ್​ಗಳ ಜೊತೆಗೆ ದಿವಂಗತ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮಗ ರಾಯನ್ ರಾಜ್ ಸರ್ಜಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡುತ್ತಿದ್ದಾನೆ.

ತೊದಲು ಮಾತಿಗೆ ಅಭಿಮಾನಿಗಳು ಫಿದಾ

ಕೆಲವು ತಿಂಗಳ ಹಿಂದೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ, ಮೇಘನಾ ರಾಜ್ ಬಹಳ ಗ್ರ್ಯಾಂಡ್ ಆಗಿ ಮಗನ ನಾಮಕರಣ ಮಾಡಿದ್ದರು. ಈಗ ರಾಯನ್​ ರಾಜ್​ ಸರ್ಜಾನಿಗೆ 11 ತಿಂಗಳು ತುಂಬುತ್ತಿದೆ. ಇನ್ನು ತೊದಲು ಮಾತಿನ ಮೂಲಕ ಚಿರು - ಮೇಘನಾ ಅಭಿಮಾನಿಗಳಿಗೆ ಖುಷಿ ನೀಡಿದ್ದಾನೆ.

ತೊದಲು ನುಡಿಯುವ ಮುದ್ದಾದ ಕ್ಷಣವನ್ನ ಮೇಘನಾ ರಾಜ್​ ವಿಡಿಯೋ ಮಾಡಿದ್ದಾರೆ. ರಾಯನ್ ರಾಜ್ ಸರ್ಜಾ ಮಾತನಾಡಲು ಪ್ರಯತ್ನಿಸುತ್ತಿದ್ದಾನೆ. ಈ ಮುದ್ದಾದ ವಿಡಿಯೋವನ್ನು ಮೇಘನಾ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Rayan Raj Sarja
ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮಗ ರಾಯನ್ ರಾಜ್

ನಮ್ಮೊಂದಿಗೆ ರಾಯನ್​ ಸರ್ಜಾನ ಪ್ರತಿ ತಿಂಗಳಿನ ಖುಷಿಯನ್ನು ಆಚರಿಸುತ್ತಿರುವ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಮೇಘನಾ ರಾಜ್​ ಬರೆದುಕೊಂಡಿದ್ದಾರೆ. ದಿವಂಗತ ಚಿರು ಪುತ್ರ ರಾಯನ್ ರಾಜ್ ಸರ್ಜಾ ಮಾತನಾಡಲು ಶುರು ಮಾಡಿರುವ ಮುದ್ದಾದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಇನ್ನು ವಿಡಿಯೋವನ್ನ ನೋಡಿದ ಸಿನಿಮಾ ಸ್ನೇಹಿತರು ಹಾಗೂ ಅಭಿಮಾನಿಗಳು ರಾಯನ್ ರಾಜ್ ಸರ್ಜಾ ತೊದಲ ಮಾತಿಗೆ ಫಿದಾ ಆಗಿದ್ದಾರೆ.

Last Updated : Sep 24, 2021, 2:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.