ಇಂದು ಸ್ಯಾಂಡಲ್ವುಡ್ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾಗೆ ಹುಟ್ಟು ಹಬ್ಬದ ಸಂಭ್ರಮ. 38 ನೇ ವಸಂತಕ್ಕೆ ಕಾಲಿಟ್ಟ ಚಿರಂಜೀವಿ ಸರ್ಜಾ ತಮ್ಮ ಕುಟುಂಬದ ಸದ್ಯಸರು ,ಅಭಿಮಾನಿಗಳು ಹಾಗೂ 'ಶಿವಾರ್ಜುನ' ಚಿತ್ರತಂಡದ ಜೊತೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡರು.
ಇನ್ನು ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ನಿಮಿತ್ತ 'ಶಿವಾರ್ಜುನ' ಚಿತ್ರದ ಆ್ಯಕ್ಷನ್ ಟೀಸರನ್ನು ಆ್ಯಕ್ಷನ್ ಪ್ರಿನ್ಸ್ ಧ್ರುವಾಸರ್ಜಾ ಬಿಡುಗಡೆ ಮಾಡಿದರು. ಅಣ್ಣನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಧ್ರುವಾ ಸರ್ಜಾ, ಟೀಸರ್ ನೋಡಿ ಇಂಪ್ರೆಸ್ ಆದರು. 'ಶಿವಾರ್ಜುನ' ಟೀಸರ್ ನೋಡಿದರೆ ಇದು ಪಕ್ಕಾ ಕಮರ್ಷಿಯಲ್ ಸಿನಿಮಾ ಅಂತ ಗೊತ್ತಾಗುತ್ತದೆ. 'ಸಿಂಗ' ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿದ್ದೆ. ಈ ಸಿನಿಮಾವನ್ನು ಕೂಡಾ ಖಂಡಿತ ಮಿಸ್ ಮಾಡದೇ ನೋಡುತ್ತೇನೆ ಎಂದರು. ಇನ್ನು 'ಶಿವಾರ್ಜುನ' ಪಕ್ಕಾ ಹಳ್ಳಿಸೊಗಡಿನ ಸೆಂಟಿಮೆಂಟ್ ಹಾಗೂ ಆ್ಯಕ್ಷನ್ ಸಿನಿಮಾವಾಗಿದ್ದು, ಖಂಡಿತ ಈ ಸಿನಿಮಾ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಅಲ್ಲದೇ ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಎಂದು ಚಿರಂಜೀವಿ ಹೇಳಿದರು. ಸಿನಿಮಾವನ್ನು ಡಿಸೆಂಬರ್ನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರದ ನಿರ್ದೇಶಕ ಶಿವತೇಜಸ್ ತಿಳಿಸಿದರು. ಹಿರಿಯ ನಟಿ ತಾರಾ ಕೂಡಾ ಚಿರಂಜೀವಿ ಹುಟ್ಟುಹಬ್ಬದ ವೇಳೆ ಹಾಜರಿದ್ದರು.
- " class="align-text-top noRightClick twitterSection" data="">