ನಿನ್ನೆ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಆದ ನಟ ಚೇತನ್ ಇಂದು ವಲ್ಲಭ ನಿಕೇತನ ಆಶ್ರಮದ ಮಕ್ಕಳು, ಸ್ನೇಹಿತರು, ಕುಟುಂಬದವರ ಜೊತೆ ಸಂತೋಷ ಕೂಟ ಏರ್ಪಡಿಸಿದ್ದರು. ಅದ್ಧೂರಿ, ಆಡಂಬರಕ್ಕೆ ಬ್ರೇಕ್ ಹಾಕಿ ಸರಳತೆಯ ಮೊರೆ ಹೋದ ಚೇತನ್ ಸಂತೋಷ ಕೂಟ ಏರ್ಪಡಿಸಿದ್ದಾರೆ.
ಗೋಂಡಾ ಕಲೆ ಶೈಲಿಯ ಸ್ಟೇಜ್ನಲ್ಲಿ ನಟ ಚೇತನ್-ಮೇಘನಾ ಸಂತೋಷ ಕೂಟ ನಡೆಯುತ್ತಿದೆ. ಮೊದಲಿಗೆ ಬುದ್ಧ, ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ನವ ದಂಪತಿಗಳು ವೇದಿಕೆ ಏರಿದ್ದಾರೆ. ಅಹಿಂಸಾ ತತ್ವದ ದಾರಿಯಡಿಯಲ್ಲಿ ನಡೆಯುತ್ತಿರೋ ನಟ ಚೇತನ್ ಮೇಘಾ, ಸಂತೋಷ ಕೂಟಕ್ಕೆ ಚಿತ್ರರಂಗದ ಹಲವು ಕಲಾವಿದರು ಆಗಮಿಸಲಿದ್ದಾರೆ. ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದಂಪತಿ ಆಗಮಿಸಿದ್ದಾರೆ.
ಅಲ್ಲದೆ ಸಂತೋಷ ಕೂಟದಲ್ಲಿ ಲಂಬಾಣಿ ಜಾನಪದ ಸಾಹಿತ್ಯ, ಸಿದ್ಧಿ ಬುಡಕಟ್ಟು ಜಾನಪದ ನೃತ್ಯ ಹಾಗೂ ಗಾಯಕ ವಾಸು ದೀಕ್ಷಿತ್ ದೇಶಿ ಸಂಗೀತ ಸಂಜೆ ಆಯೋಜಿಸಲಾಗಿದೆ. ಇದರ ಜೊತೆ ಚೇತನ್ ಮೇಘಾ ಸಂತೋಷ ಕೂಟದಲ್ಲಿ ವಿಶೇಷ ಭಕ್ಷ್ಯಗಳು ರೆಡಿಯಾಗ್ತಿವೆ. ಬೇಳೆ ಹೋಳಿಗೆ, ಜೋಳದ ರೊಟ್ಟಿ, ಎಣ್ಣೆಗಾಯಿ, ರಾಗಿಮುದ್ದೆ, ಕೆಂಪಕ್ಕಿ ಅನ್ನ, ಮೈಸೂರ್ ಪಾಕು ಸೇರಿದಂತೆ ಹಲವು ತಿನಿಸುಗಳನ್ನು ಸಿದ್ಧಗೊಳಿಸಲಾಗಿದೆ.