ಬೆಳಕಿನ ಹಬ್ಬ ದೀಪಾವಳಿಯನ್ನು ಕಿರುತೆರೆ ನಟಿಯರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನಟಿ ಹಾಗೂ ನಿರೂಪಕಿ ಅನುಶ್ರೀ ಸರಿಗಮಪ ಸೆಟ್ನಲ್ಲಿ ದೀಪ ಬೆಳಗುವ ಮೂಲಕ ಹಬ್ಬವನ್ನು ಸಂಭ್ರಮಿಸಿದ್ದಾರೆ.

ಹಾಗೆಯೇ, ಪಟಾಕಿಗಳನ್ನು ಹೊಡೆದು ಪರಿಸರ ಮಾಲಿನ್ಯ ಉಂಟು ಮಾಡದಂತೆ ಮನವಿ ಕೂಡ ಮಾಡಿದ್ದಾರೆ. ಅಲ್ಲದೇ ಮನ, ಮನೆಗಳು ಜ್ಞಾನದ ಜ್ಯೋತಿಯಿಂದ ಬೆಳಗಲಿ. ಕತ್ತಲನ್ನು ಸರಿಸಿ ಬೆಳಕು ನೀಡುವ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ ನಿರೂಪಕಿ ಅನುಶ್ರೀ.
ಉದಯ ವಾಹಿನಿಯ ಮನಸಾರೆ ಧಾರಾವಾಹಿಯ ಇಡೀ ತಂಡ ದೀಪಗಳನ್ನು ಬೆಳಗುತ್ತಾ ದೀಪಾವಳಿ ಶುಭಾಶಯ ಕೋರಿದ್ದಾರೆ. ಸಂಗೀತಗಾರ ವಿಜಯಪ್ರಕಾಶ್ ತಮ್ಮ ಮನೆಯಲ್ಲಿ ತಾಯಿ ಹಾಗೂ ಕುಟುಂಬದೊಂದಿಗೆ ವಿಶಿಷ್ಟವಾಗಿ ದೀಪಾವಳಿಯನ್ನು ಸಂಭ್ರಮಿಸಿದ್ದಾರೆ.

ಧಾರಾವಾಹಿಯ ನಟ ಭವಾನಿ ಸಿಂಗ್ ಪತ್ನಿ ಪಂಕಜಾ ಶಿವಣ್ಣ, ಕಾವ್ಯಾಗೌಡ, ಸೌಮ್ಯ ಭಟ್, ಧನ್ಯ, ದೀಪಿಕಾ, ಶ್ವೇತಾ ಶ್ರೀವಾತ್ಸವ್ ತಮ್ಮ ಮುದ್ದು ಮಗಳೊಂದಿಗೆ ದೀಪಗಳನ್ನು ಹಚ್ಚುವ ಮೂಲಕ ಶಬ್ಧರಹಿತ, ಮಾಲಿನ್ಯ ರಹಿತ ದೀಪಾವಳಿ ಆಚರಿಸೋಣ ಎಂದು ಕರೆ ನೀಡಿದ್ದಾರೆ.



