ETV Bharat / sitara

ಮಿ ಟೂ ಪ್ರಕರಣ: ನ್ಯಾಯಾಲಯದಲ್ಲಿ ಶ್ರುತಿ ಹರಿಹರನ್​​​ಗೆ ಹಿನ್ನಡೆ - ಸಿಟಿ ಸಿವಿಲ್ ನ್ಯಾಯಾಲಯ

ಕಳೆದ ವರ್ಷ ವಿಸ್ಮಯ ಸಿನಿಮಾ ಚಿತ್ರೀಕರಣ ವೇಳೆ ನಟ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆ ಚಿತ್ರದ ನಟಿ ಶ್ರುತಿ ಹರಿಹರನ್ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್​ ಸರ್ಜಾ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದನ್ನು ರದ್ದು ಪಡಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದ ಶ್ರುತಿಗೆ ಹಿನ್ನಡೆಯಾಗಿದೆ.

Shruti Hariharan
author img

By

Published : Aug 22, 2019, 8:29 PM IST

ಬೆಂಗಳೂರು: ನಟಿ ಶ್ರುತಿ ಹರಿಹರನ್ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ರದ್ದು ಪಡಿಸಲು ಸಿಟಿ ಸಿವಿಲ್ ನ್ಯಾಯಾಲಯ ನಿರಾಕರಿಸಿದೆ.

ಬಹುಭಾಷಾ ನಟ ಅರ್ಜುನ್ ಸರ್ಜಾ‌ ವಿರುದ್ಧ ಮಿ ಟೂ ಆರೋಪದ ಪ್ರಕರಣದ ವೇಳೆ ತಮ್ಮ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ರದ್ದು ಪಡಿಸುವಂತೆ ಶ್ರುತಿ ಕೋರ್ಟ್​​​ ಮೊರೆ ಹೋಗಿದ್ದರು. ಇಂದು ನ್ಯಾಯಾಲಯದಲ್ಲಿ ಈ ಅರ್ಜಿ ವಿಚಾರಣೆಗೆ ಬಂತು. ಈ ವೇಳೆ ಅರ್ಜುನ್ ಸರ್ಜಾ ಪರ ವಕೀಲ ಶ್ಯಾಮ್ ಸುಂದರ್ ವಾದ ಮಾಡಿ, ಶ್ರುತಿ ವಿನಾಕಾರಣ ಆರೋಪ ಮಾಡಿ ನಟ ಅರ್ಜುನ್ ಸರ್ಜಾ ಘನತೆಗೆ ಧಕ್ಕೆ ತಂದಿದ್ದಾರೆ. ಹೀಗಾಗಿ ಖ್ಯಾತ ನಟ ಅರ್ಜುನ್ ಸರ್ಜಾ ಅವರಿಗೆ ಬಹಳ ತೊಂದರೆಯಾಗಿದೆ ಎಂದು ತಿಳಿಸಿದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಈ ಅರ್ಜಿ ವಜಾ ಮಾಡಿತು. ಇದರಿಂದ ಸದ್ಯಕ್ಕೆ ಮಾನನಷ್ಟ ಪ್ರಕರಣದಲ್ಲಿ ನಟಿ ಶ್ರುತಿ ಹರಿಹರನ್​​ಗೆ ಹಿನ್ನಡೆಯಾದಂತಾಗಿದೆ.

Intro:ಮೀಟು ಪ್ರಕರಣ :
ಶ್ರುತಿಹರಿಹರನ್ ವಿರುದ್ಧದ ಮಾನನಷ್ಟ ಮೊಕ್ಕದಮ್ಮೆ ರದ್ದು ಪಡಿಸಲು ಕೋರ್ಟ್ ನಕಾರ

ಬಹುಭಾಷ ನಟ ಅರ್ಜುನ್ ಸರ್ಜಾ‌ ಮೀಟು ಪ್ರಕರಣದಲ್ಲಿ ತಮ್ಮ ವಿರುದ್ದ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನ ರದ್ದು ಪಡಿಸುವಂತೆ ಕೋರಿ ಶ್ರುತಿ ಹರಿಹರನ್ ಸಲ್ಲಿಸಿದ್ದ ಅರ್ಜಿಯನ್ನ ಸಿಟಿ ಸಿವಿಲ್ ನ್ಯಾಯಲಯ ವಜಾ ಮಾಡಿದೆ. ಇದರಿಂದ ಸದ್ಯಕ್ಕೆ ಮಾನ ನಷ್ಟ ಪ್ರಕರಣದಲ್ಲಿ ನಟಿ ಶ್ರುತಿ ಹರಿಹರನ್ ಗೆ ಹಿನ್ನಡೆಯಾಗಿದೆ

ವಿಚಾರಣೆ ವೇಳೆ ಅರ್ಜುನ್ ಪರ ವಕೀಲ ಶ್ಯಾಂಮ್ ಸುಂದರ್ ವಾದ ಮಾಡಿ ಶ್ರುತಿ ವಿನಾಕಾರಣ ಆರೋಪ ಮಾಡಿ ನಟ ಅರ್ಜುನ್ ಸರ್ಜಾ ಗಣತೆಗೆ ಧಕ್ಕೆ ತಂದಿದ್ದಾರೆ.ಹೀಗಾಗಿ ಖ್ಯಾತ ನಟನಾದ ಅರ್ಜುನ್ ಸರ್ಜಾ ಅವ್ರಿಗೆ ಬಹಳ ತೊಂದರೆಯಾಗಿದೆ ಎಂದು ತಿಳಿಸಿದ್ದರು. ಹೀಗಾಗಿ ಸದ್ಯ ಶ್ರುತಿ ಅರ್ಜಿ ವಜಾ ಮಾಡಲಾಗಿದೆ

ಏನಿದು ಪ್ರಕರಣ
ಶೃತಿ ಅರ್ಜುನ್ ಸರ್ಜಾ ವಿರುದ್ದ  ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ  ವಿಸ್ಮಯ ಚಲನಚಿತ್ರ ಚಿತ್ರಿಕರಣ ವೇಳೆ ಅರ್ಜುನ್ ಸರ್ಜಾಬಲೈಂಗಿಕ ಕಿರುಕುಳ ಮಾಡಿದ್ರು ಎಂದು ಆರೋಪಿಸಿದ್ರು.. ಇದಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು .

Body:KN_BNG_10_SRUTHI_7204498Conclusion:KN_BNG_10_SRUTHI_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.