ETV Bharat / sitara

ಬಿಆರ್​ಎಲ್ ಹೇಳಿದ್ರು ಸಂಭಾವನೆ ಕಥೆ :  ಹೆಂಡತಿಗೆ ಕೊಟ್ಟಿದ್ದರು 800 ರೂ.ದ ಗಿಫ್ಟ್​​​​​ - b.l lakshman rao news

ಬಿಆರ್​ಎಲ್ ಎಂದೇ ಪ್ರಸಿದ್ದಿ ಪಡೆದಿರುವ ಸುಪ್ರಸಿದ್ದ ಕವಿ, ಕನ್ನಡ ಸಿನಿಮಾಕ್ಕೂ ನಂಟು ಹೊಂದಿರುವ ಡಾ .ಬಿ. ಆರ್. ಲಕ್ಷ್ಮಣ್ ರಾವ್. ಮೊದಲ ಬಾರಿಗೆ ಫೇಸ್​ಬುಕ್​ ಮೂಲಕ ಸಂಭಾವನೆ ಬಹಿರಂಗ

BLR
ಡಾ .ಬಿ. ಆರ್. ಲಕ್ಷ್ಮಣ್ ರಾವ್
author img

By

Published : May 22, 2020, 7:05 PM IST

ಬೆಂಗಳೂರು : ಸುಪ್ರಸಿದ್ಧ ಕವಿ, ಕನ್ನಡ ಸಿನಿಮಾಕ್ಕೂ ನಂಟು ಹೊಂದಿರುವ ಡಾ .ಬಿ. ಆರ್. ಲಕ್ಷ್ಮಣ್ ರಾವ್ ಅವರು ಮೊದಲ ಬಾರಿಗೆ ಸವಿಸ್ತಾರವಾಗಿ ತಮಗೆ ಬರುತ್ತಿದ್ದ ಸಂಭಾವನೆಯ ಬಗ್ಗೆ ಫೇಸ್ ಬುಕ್​ನಲ್ಲಿ ಮಾತನಾಡಿದ್ದಾರೆ.

ಕಳೆದ 55 ವರ್ಷಗಳಿಂದ ಕವಿತೆಯನ್ನು ಬರೆಯುತ್ತಾ ಬಂದಿರುವ ಬಿಆರ್​ಎಲ್ ಎಂದೇ ಪ್ರಸಿದ್ಧಿ ಪಡೆದಿರುವ ಅವರು, 1970 ರಲ್ಲಿ10 ರೂಪಾಯಿ ಸಂಭಾವನೆಯನ್ನು ‘ಗೋಕುಲ’ ಪತ್ರಿಕೆಯಿಂದ ಪಡೆದಿದ್ದನ್ನು ಜ್ಞಾಪಿಸಿಕೊಂಡರು. ನಂತರ ಪ್ರಜಾವಾಣಿ ಪತ್ರಿಕೆಯಿಂದ ಕವಿತೆಯೊಂದಕ್ಕೆ 25 ರೂಪಾಯಿ. ಅದು ಮುಂದಿನ ದಿನಗಳಲ್ಲಿ ಸಾವಿರ ವರೆಗೂ ಹೋಗಿತ್ತು, ಹಾಗೂ ಸಿನಿಮಾ ಹಾಡು ಬಳಕೆ ಮಾಡಿದ್ದಕ್ಕೆ 50,000 ರೂಪಾಯಿ ವರೆಗೂ ಪಡೆದಿದ್ದಾಗಿ ತಿಳಿಸಿದ್ದಾರೆ.

ಬಿಆರ್​ಎಲ್ ಹಾಗೂ ಡಾ. ಎಚ್​​ಎಸ್​ವಿ ಸೇರಿ ಆಕಾಶ ವಾಣಿಯಲ್ಲಿ ನಿಲಯದ ಕಲಾವಿದರ ಪಟ್ಟಿಗೆ ಸೇರಿಕೊಂಡಾಗ 20 ರಿಂದ 25 ಕವಿತೆಗಳ ಪುಸ್ತಕವನ್ನು ಪ್ರಕಟ ಮಾಡಿದ್ದು, ಒಂದು ಹಂತ ಎನ್ನುತ್ತಾರೆ. ಆಕಾಶವಾಣಿಯಲ್ಲಿ ಬಿಆರ್​​ಎಲ್ ಅವರ ಒಂದು ಭಾವ ಗೀತೆ ಪ್ರಸಾರ ಮಾಡಿದರೆ ಒಂದು ಬಾರಿ ಪ್ರಸಾರಕ್ಕೆ ಒಂದು ರೂಪಾಯಿ ಅಂತೆ ವರ್ಷದ ಕಡೆಯಲ್ಲಿ 15,000 ದಿಂದ 20000 ರೂಪಾಯಿ ಬರುತ್ತಿತ್ತಂತೆ. ಐಪಿಆರ್​ಎಸ್​ನಿಂದ ಸಹ ವರ್ಷದ ಕೊನೆಯಲ್ಲಿ ಹಣ ಜಮೆ ಆಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ನಂತರ ಕ್ಯಾಸೆಟ್ ಲೋಕ ಶುರುವಾದ ಮೇಲೆ ಒಂದು ಹಾಡಿಗೆ 250 ರೂಪಾಯಿಯನ್ನು ಡಾ. ಸಿ. ಅಶ್ವಥ್ ಅವರಿಂದ ಪಡೆದದ್ದಾಗಿ ಹೇಳಿಕೊಂಡಿದ್ದಾರೆ.

ಬಿಆರ್​ಎಲ್​ 1987 ರಲ್ಲಿ 800 ರೂ. ಕೊಟ್ಟು ಮಡದಿಗಾಗಿ ಒಂದು ಗ್ರೈಂಡರ್ ಖರೀದಿಸಿದ್ದರಂತೆ. ಆ ಗ್ರೈಂಡರ್ 33 ವರ್ಷಗಳ ಕಾಲ ಅಡುಗೆ ಮನೆ ಸಂಗಾತಿ ಆಗಿತ್ತು ಮರೆಯಲಾರದ ನೆನಪು ಎಂದು ಬಿಆರ್​ಎಲ್ ಹೇಳಿದರು.

ನಾವು ಅಂದಿಗೂ, ಇಂದಿಗೂ ದುಡ್ಡಿಗೆ ಆಸೆ ಪಟ್ಟು ಬರೆಯಲೇ ಇಲ್ಲ. ಸಿನಿಮಾ ಕ್ಷೇತ್ರದವರು ಹಾಡುಗಳನ್ನು ಬಳಸಿ 10,000 ದಿಂದ 50000 ರೂಪಾಯಿ ವರೆಗೂ ನೀಡಿದ್ದು ದೊಡ್ಡ ಮೊತ್ತ. ಒಬ್ಬ ಕವಿ ಜನಪ್ರಿಯತೆಗಾಗಿ ಬರೆಯುವುದರ ಬದಲು ಜನರ ಪ್ರೀತಿಗೆ ಬರೆಯಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.