ಬಿಗ್ ಬಾಸ್ ಖ್ಯಾತಿಯ ಡ್ಯಾನ್ಸರ್ ಕಿಶನ್ ಬೆಳಗಲಿ ಇದೀಗ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿಸ್ಮಯಾ ಗೌಡ ನಿರ್ದೇಶನ ಮಾಡಿ ಬಂಡವಾಳ ಹೂಡುತ್ತಿರುವ ‘ಡಿಯರ್ ಕಣ್ಮಣಿ’ ಚಿತ್ರದಲ್ಲಿ ಕಿಶನ್ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ಇತ್ತೀಚೆಗೆ ಸಿನಿಮಾ ಮುಹೂರ್ತ ಕಾರ್ಯಕ್ರಮ ಗುಟ್ಟೆ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿದೆ. ಕಾರ್ಯಕ್ರಮಕ್ಕೆ ಸುದೀಪ್ ಆಗಮಿಸಿ ಕ್ಲಾಪ್ ಮಾಡುವ ಮೂಲಕ ಶುಭ ಹಾರೈಸಿದ್ರು. ಅಲ್ಲದೆ ಇದೇ ವೇಳೆ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಈ ಚಿತ್ರ ಪ್ರೇಮ ಕಥೆ ಹೊಂದಿದೆ. ಕಿಶನ್ ನಾಯಕನಾಗಿ ನಟಿಸುತ್ತಿದ್ದು, ನಾಯಕಿಯಾಗಿ ಓಂಪ್ರಕಾಶ್ ಮಗಳಾದ ಸಾತ್ವಿಕಾ ಬಣ್ಣ ಹಚ್ಚುತ್ತಿದ್ದಾರೆ.