ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯ ಪಾತ್ರ ಗಿಟ್ಟಿಸಿಕೊಂಡಿರುವ ಭವ್ಯಾ ಗೌಡ ಇದೀಗ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ವಿಸ್ಮಯಾ ಗೌಡ ನಿರ್ದೇಶನದ ಡಿಯರ್ ಕಣ್ಮಣಿ ಸಿನಿಮಾದಲ್ಲಿ ನಟಿಸುವ ಮೂಲಕ ಹಿರಿತೆರೆಗೆ ಹಾರಿರುವ ಭವ್ಯಾ ಗೌಡ, ವಿಭಿನ್ನ ಪಾತ್ರದ ಮೂಲಕ ಮೋಡಿ ಮಾಡಲಿದ್ದಾರೆ.
ಗಗನಸಖಿಯಾಗಬೇಕು ಎಂದುಕೊಂಡಿದ್ದ ನಾನು ಅಪ್ಪ-ಅಮ್ಮನ ಆಸೆ ನೆರವೇರಿಸಲು ಬಣ್ಣದ ಲೋಕಕ್ಕೆ ಬಂದೆ. ಮೊದಲ ಧಾರಾವಾಹಿಯಲ್ಲಿ ನಾಯಕಿಯ ಪಾತ್ರ ದೊರಕಬಹುದು ಎಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ. ಇದೀಗ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದು, ಇದರಲ್ಲಿ ನಾನು ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ವಯಸ್ಸಿಗೂ ಮೀರಿದ ಪಾತ್ರವದು. ತುಂಬಾ ಖುಷಿಯಾಗುತ್ತಿದೆ ಎಂದು ಹೇಳುವ ಭವ್ಯಾ ಗೌಡಗೆ ಹಳ್ಳಿ ಹುಡುಗಿಯ ಪಾತ್ರದಲ್ಲಿಯೂ ಮುಂದೆಯೂ ನಟಿಸುವ ಬಯಕೆಯಂತೆ.