ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯದ ಭರಾಟೆ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಂಡಿದೆ. ಚಿತ್ರಕ್ಕೆ ಮಾಸ್ ಓಪನಿಂಗ್ ಸಿಕ್ಕಿದ್ದು, ಮೊದಲ ದಿನ ಮೊದಲ ಶೋ ಗೆ ಜನಸಾಗರವೇ ಹರಿದು ಬಂದಿತ್ತು.
ಅಲ್ಲದೆ ಸಿನಿಮಾ ನೋಡಿದ ರೋರಿಂಗ್ ಸ್ಟಾರ್ ಫ್ಯಾನ್ಸ್ ಅಗಸ್ತ್ಯನ ಖದರ್ಗೆ ಫಿದಾ ಆಗಿದ್ದಾರೆ. ಚಿತ್ರದಲ್ಲಿ ರೋರಿಂಗ್ ಸ್ಟಾರ್ ಗೆ ಸೆಕೆಂಡ್ ಹಾಫ್ ಅಭಿಮಾನಿಗಳಿಗೆ ಸರ್ಪ್ರೈಸ್ ಆಗಿತ್ತು. ಚಿತ್ರತಂಡ ಇಲ್ಲಿಯವರೆಗೂ ಈ ಯಾವುದೇ ವಿಷಯವನ್ನು ಬಿಟ್ಟುಕೊಡದೇ ಗೌಪ್ಯತೆ ಕಾಪಾಡಿಕೊಂಡಿದ್ದರು. ರೋರಿಂಗ್ ಸ್ಟಾರ್ನ ಡಬಲ್ ಆ್ಯಕ್ಟಿಂಗ್ ಪಾತ್ರ ಇಂದು ಮಾತ್ರ ರಿವೀಲ್ ಆಗಿದೆ. ಈ ಪಾತ್ರ ನೋಡಿದ ಅಭಿಮಾನಿಗಳಿಗೆ ಶಾಕ್ ಜೊತೆ ಫುಲ್ ಖುಷ್ ಆಗಿದ್ದಾರೆ.
ಭರಾಟೆ ಚಿತ್ರದಲ್ಲಿ ಭರಪೂರ ಆ್ಯಕ್ಷನ್ ಇದ್ದು, ಆ್ಯಕ್ಷನ್ ಪ್ರಿಯರಿಗೆ ಬಿರಿಯಾನಿ ತಿಂದಷ್ಟೆ ಖುಷಿಯಾಗಿದೆ. ಇನ್ನು ಭರಾಟೆ ಚಿತ್ರವನ್ನು ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ನೋಡಿದ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಹಾಗೂ ಕುಟುಂಬಸ್ಥರು ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್ ಗೆ ಸಂತಸ ಪಟ್ಟಿದ್ದಾರೆ.
ಅಭಿಮಾನಿಗಳ ಜೊತೆ ಸಿನಿಮಾ ನೋಡಲು ಕಾರ್ ಮೇಲೆ ಕುಳಿತು ಗ್ರಾಂಡ್ ಆಗಿ ಎಂಟ್ರಿ ಕೊಟ್ಟ ಶ್ರೀ ಮುರುಳಿಗೆ ಹೂವಿನ ಸುರಿಮಳೆಗೈದು ಅಭಿಮಾನಿಗಳು ಸ್ವಾಗತಿಸಿದರು. ಅಲ್ಲದೆ ಶ್ರೀ ಮುರುಳಿ ಥಿಯೇಟರ್ ನಲ್ಲಿ ಭರಾಟೆ ಚಿತ್ರದ ಟೈಟಲ್ ಟ್ರ್ಯಾಕ್ ಗೆ ಫ್ಯಾನ್ಸ್ ಜೊತೆ ಸಖತ್ ಸ್ಟೆಪ್ ಹಾಕಿದರು. ಸದ್ಯ ನಿರೀಕ್ಷೆಯಂತೆ ಭರಾಟೆ ಚಿತ್ರಕ್ಕೆ ಅದ್ಧೂರಿ ಓಪನಿಂಗ್ ಸಿಕ್ಕಿದ್ದು, ಚಿತ್ರ ಗೆಲ್ಲಿಸಿದ ಕನ್ನಡಿಗರಿಗೆ ಇಡಿ ಚಿತ್ರತಂಡ ಧನ್ಯವಾದ ತಿಳಿಸಿದೆ.