ETV Bharat / sitara

ಹ್ಯಾಟ್ರಿಕ್ ಹೀರೋ ಹುಟ್ಟುಹಬ್ಬಕ್ಕೆ 'ಭಜರಂಗಿ-2' ಗಿಫ್ಟ್

author img

By

Published : Jul 12, 2020, 4:29 PM IST

ಸೆಂಚುರಿ ಸ್ಟಾರ್ ಡಾ.ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನವಾದ ಇಂದು ನಿರ್ದೇಶಕ ಎ. ಹರ್ಷ – ಶಿವಣ್ಣ ಕಾಂಬಿನೇಷನ್ ಹೊಂದಿರುವ ‘ಭಜರಂಗಿ 2’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.

bhajarangi 2 official teaser
ಹ್ಯಾಟ್ರಿಕ್ ಹೀರೋ ಹುಟ್ಟುಹಬ್ಬಕ್ಕೆ 'ಭಜರಂಗಿ-2' ಗಿಫ್ಟ್

ಇಂದು ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ. ಟಗರು ಶಿವನ ಬರ್ತ್​ ಡೇ ಸ್ಪೆಷಲ್ ಆಗಿ ಭಜರಂಗಿ 2 ಚಿತ್ರದ ಟೀಸರ್ ಲಾಂಚ್ ಆಗಿದೆ.

ಕೊರೊನಾದಿಂದ ಕಳೆಗುಂದಿದ್ದ ಟಗರು ಶಿವನ ಹುಟ್ಟು ಹಬ್ಬವನ್ನು ಭಜರಂಗಿ 2 ಟೀಸರ್ ಕಲರ್ ಪುಲ್ ಮಾಡಿದೆ. ನಿರ್ದೇಶಕ ಎ. ಹರ್ಷ ವಜ್ರಕಾಯ ಚಿತ್ರದ ನಂತರ ಹ್ಯಾಟ್ರಿಕ್ ಹೀರೋ ಜೊತೆ ಹ್ಯಾಟ್ರಿಕ್ ಕಾಂಬಿನೇಷನ್​​ನಲ್ಲಿ ಮೂಡಿ ಬಂದಿರುವ ಭಜರಂಗಿ 2 ಚಿತ್ರದ ಟೀಸರ್ ಅಭಿಮಾನಿಗಳಲ್ಲಿ ಸಿನಿಮಾ ನೋಡುವ ತುಡಿತ ಹೆಚ್ಚಿಸಿದೆ.

  • " class="align-text-top noRightClick twitterSection" data="">

ಭಜರಂಗಿ ಚಿತ್ರದಲ್ಲಿ ಕುತೂಹಲಕಾರಿ ಕಥೆ ಇಟ್ಟು ಸಕ್ಸಸ್ ಕಂಡಿದ್ದ ನಿರ್ದೇಶಕ ಎ. ಹರ್ಷ, ಭಜರಂಗಿ 2 ಚಿತ್ರದಲ್ಲೂ ಅತಿ ಅಮಾನುಷ ಪಾತ್ರಗಳ ಸೃಷ್ಟಿಸಿರೋದು ಟೀಸರ್​​ನಲ್ಲಿ ಗೊತ್ತಾಗಿದ್ದು, ಟೀಸರ್​​ನಲ್ಲಿ ಶಿವಣ್ಣ ಕಣ್ಣಲ್ಲೇ ಬೆಂಕಿ ಉಗುಳಿ ಅಭಿಮಾನಿಗಳ ಕುತೂಹಲ ತಣಿಸಿದ್ದಾರೆ. ಒಂಟಿ ಸಲಗದ ಎನರ್ಜಿಯಲ್ಲಿ ಶಿವಣ್ಣ ಕಣ್ಣಲ್ಲೇ ಕಿಲ್ ಮಾಡಿದ್ದಾರೆ.

ಟೀಸರ್​​ನಲ್ಲಿ ಪಾತ್ರಗಳ ಪರಿಚಯ ಮಾಡಿರುವ ನಿರ್ದೇಶಕ ಎ.ಹರ್ಷ, ಚಿತ್ರದ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ. ಭಜರಂಗಿ ಚಿತ್ರದಲ್ಲಿ ರಕ್ತಾಕ್ಷನಾಗಿ ಅಬ್ಬರಿಸಿದ್ದ ಲೋಕಿ ಇಲ್ಲಿ ಚಾಣಕ್ಷನ ಗೆಟಪ್​​ನಲ್ಲಿ ಸೂಕ್ಷ್ಮವಾಗಿ ಕಾಣಿಸಿದ್ದಾರೆ. ಜೊತೆಗೆ ನಟಿ ಶ್ರುತಿ ಅವರ ಪಾತ್ರ ಟೀಸರ್​​ನಲ್ಲಿ ಹೈಲೆಟ್ ಆಗಿದ್ದು, ಹಿಂದೆಂದೂ ಕಾಣಿಸದ ಪಾತ್ರದಲ್ಲಿ ಶ್ರುತಿ ಕಾಣಿಸಿದ್ದಾರೆ.

ಅಲ್ಲದೆ ಚಿತ್ರದ ಮೇಕಿಂಗ್ ಕೂಡ ಥ್ರಿಲ್ ಆಗಿದ್ದು, ಒಟ್ಟಾರೆ ಭಜರಂಗಿ - 2 ಟೀಸರ್ ಹಲವು ವಿಶೇಷತೆಗಳ ಪಾತ್ರಗಳ ಪರಿಚಯ ಮಾಡಿಸಿದ್ದು, ಟೀಸರ್ ನೋಡಿದ ಶಿವಸೈನ್ಯ ಸಿನಿಮಾ ಯಾವಾಗ ನೋಡ್ತಿವಿ ಅಂತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.