ETV Bharat / sitara

ಕೆಜಿಎಫ್​​ಓಎ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ನಟ, ಬಾಡಿ ಬಿಲ್ಡರ್ ಎ.ವಿ. ರವಿ

ಸಿನಿಮಾದಲ್ಲಿ ನಟನೆ ಜೊತೆಗೆ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಕೂಡಾ ಭಾಗವಹಿಸುತ್ತಾ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಎ.ವಿ.ರವಿ ಇದೀಗ ಕರ್ನಾಟಕ ಜಿಮ್ ಅಂಡ್ ಫಿಟ್ನೆಸ್ ಓನರ್ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆ ಆಗಿದ್ಧಾರೆ.

author img

By

Published : Jun 30, 2020, 11:05 AM IST

AV Ravi selected as KGFOA president
ಬಾಡಿ ಬಿಲ್ಡರ್ ಎ.ವಿ. ರವಿ

ಸ್ಯಾಂಡಲ್​ವುಡ್​ ನಟ, ಮಾಜಿ ಬಿಗ್​​​ಬಾಸ್​ ಸ್ಪರ್ಧಿ, ಬಾಡಿ ಬಿಲ್ಡರ್ ಎ.ವಿ. ರವಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಜನಪ್ರಿಯತೆ ಪಡೆದ ವ್ಯಕ್ತಿ. ಬಾಡಿ ಬಿಲ್ಡಿಂಗ್​​ನಲ್ಲಿ ಮಿಸ್ಟರ್ ಇಂಡಿಯಾ ಪಟ್ಟ ಕೂಡಾ ಪಡೆದಿರುವ ರವಿ ದೇಶ, ವಿದೇಶಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡು ಬಂದಿದ್ದಾರೆ.

AV Ravi selected as KGFOA president
ಅನೇಕ ಪ್ರಶಸ್ತಿಗಳನ್ನು ಪಡೆದಿರುವ ರವಿ

ರವಿ ಅವರಿಗೆ ಗೌರವ ಡಾಕ್ಟರೇಟ್ ಕೂಡಾ ಲಭಿಸಿದ್ದು ಆರ್​​​ಎಸ್​​ಎಸ್​​​​​​​​ ಕ್ರೀಡಾ ರಾಯಭಾರಿ ಆಗಿ ನೇಮಕ ಆಗಿದ್ದಾರೆ. ಮೊನ್ನೆ ನಡೆದ ಕರ್ನಾಟಕ ಜಿಮ್ ಅಂಡ್ ಫಿಟ್ನೆಸ್ ಓನರ್ ಸಂಘಕ್ಕೆ ರವಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ನಾಗರಬಾವಿ ಬಳಿ ರವಿ ಜಿಮ್​ ಸೆಂಟರ್​​​​​​​ ಸ್ಥಾಪನೆ ಮಾಡಿದ್ದಾರೆ. ಈಗ ಅವರಿಗೆ ದೊರೆತಿರುವ ಹೊಸ ಹುದ್ದೆ ಮೂಲಕ ರಾಜ್ಯದಲ್ಲಿ ಜಿಮ್​ ಸೆಂಟರ್​​​​​​​​​​ಗಳ ಸಮಸ್ಯೆಗಳಿಗೆ ಅವರು ಸ್ಪಂದಿಸಲಿದ್ದಾರೆ. ಭರತ್ ಶ್ರೀ, ಏಕಲವ್ಯ , ಅಂತಾರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಪ್ರಶಸ್ತಿಯನ್ನು ಕೂಡಾ ರವಿ ಪಡೆದಿದ್ದಾರೆ.

AV Ravi selected as KGFOA president
ಕೆಜಿಎಫ್​​ಓಎ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ರವಿ

ಕರ್ನಾಟಕ ಜಿಮ್ ಮತ್ತು ಫಿಟ್ನೆಸ್ ಮಾಲೀಕರ ಸಂಘದ ಅಧ್ಯಕ್ಷ ರವಿ ಅವರ ಜೊತೆಗೆ ಈ ಸಂಘಕ್ಕೆ ಎಸ್​. ಗಿರೀಶ್ ಬಾಬು, ವಿಜಯ್ ಕುಮಾರ್, ಎಂ.ಜೆ. ಅರವಿಂದ್​​​​ ಕುಮಾರ್ ಡಿ ಪೊರ್ವಾಲ್, ಅರುಣ್​​ ಕುಮಾರ್.ಡಿ , ಪೂರ್ಣಿಮಾ ರಾಕೇಶ್​​​​​ ಸಂಘದ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಈ ಸಂಘದ ಕಚೇರಿ ಬೆಂಗಳೂರಿನ ಜೆ.ಪಿ. ನಗರದಲ್ಲಿದೆ. ರವಿ ಸದ್ಯಕ್ಕೆ ನಾಗರಬಾವಿ ಕ್ಲಬ್ ಸ್ಪೋರ್ಟ್​ ಕಮಿಟಿ ಚೇರ್ಮನ್ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.