ಲಾಕ್ ಡೌನ್ ಬಳಿಕ ಕರ್ನಾಟಕದಲ್ಲಿ ಯಾವುದೇ ಹೊಸ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಈಗ ನಿರ್ದೇಶಕ ಮಂಸೋರೆ ನಿರ್ದೇಶನದ, ಯಜ್ಞ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರೋ ಆಕ್ಟ್ 1978 ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಆದರೆ ಸಿನಿಮಾ ಪಂಡಿತರ ಪ್ರಕಾರ ಹೊಸ ಚಿತ್ರ ರಿಲೀಸ್ ಮಾಡಿದ್ರೆ, ಸಹಜವಾಗಿ ಸಿನಿಮಾ ಪ್ರಿಯರು ಥಿಯೇಟರ್ ಕಡೆ ಮುಖ ಮಾಡ್ತಾರೆ ಎಂಬ ನಂಬಿಕೆಯಲ್ಲಿದ್ರು. ಆದರೆ ಈ ನಂಬಿಕೆ ಈಗ ಸುಳ್ಳಾಗಿದ್ದು, ನಿರೀಕ್ಷೆ ಮಾಡಿದ ಮಟ್ಟದಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ಮನಸ್ಸು ಮಾಡಿಲ್ಲ.
ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಭ್ರಷ್ಟತೆ ವಿರುದ್ಧದ ಪಾತ್ರದಲ್ಲಿ ಯಜ್ಞ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಗೀತಾ ಎಂಬ ನೊಂದ ಮಹಿಳೆ ಪಾತ್ರದಲ್ಲಿ ಯಜ್ಞ ಶೆಟ್ಟಿ ಅದ್ಭುತವಾಗಿ ನಟಿಸಿದ್ದು, ವಯಸ್ಸಾದ ವೃದ್ಧ ಪಾತ್ರಕ್ಕೆ ನಟ ಬಿ ಸುರೇಶ್ ಜೀವ ತುಂಬಿದ್ದಾರೆ. ಇದ್ರ ಜೊತೆಗೆ ಹಿರಿಯ ನಟ ದತ್ತಣ್ಣ, ಅವಿನಾಶ್, ಅಚ್ಯುತ್ ಕುಮಾರ್, ಶೃತಿ, ಪ್ರಮೋದ್ ಶೆಟ್ಟಿ , ಸಂಚಾರಿ ವಿಜಯ್, ಸೇರಿದಂತೆ ಸಾಕಷ್ಟು ಕಲಾವಿದರ ದಂಡು ಈ ಚಿತ್ರದಲ್ಲಿದೆ.
ಎಂಟು ತಿಂಗಳು ಯಾವುದೇ ಹೊಸ, ಸಿನಿಮಾ ಬಿಡುಗಡೆ ಇಲ್ಲದೆ, ಮನೆಯಲ್ಲೇ ಸಿನಿಮಾ ನೋಡಿದ, ಕೆಲವೇ ಕೆಲವು ಸಿನಿಮಾ ಪ್ರೇಕ್ಷಕರು ಆಕ್ಟ್ 1978 ಸಿನಿಮಾ ಸ್ವತಃ ವಿಮರ್ಶೆ ಮಾಡಿದ್ದಾರೆ. ಹಾಗಾದರೆ ಸಿನಿಮಾ ನೋಡಿದ ಪ್ರೇಕ್ಷಕ ಪ್ರಭು ತಮ್ಮ ಅಭಿಪ್ರಾಯವನ್ನ ಹೀಗೆ ವ್ಯಕ್ತಪಡಿಸಿದ್ದಾರೆ.