ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ಆಶಿತಾ ಚಂದ್ರಪ್ಪ ತಮ್ಮ ಹಳೆಯ ಸುಂದರ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಶಾಲಿನಿಯಾಗಿ ಕಿರುತೆರೆಗೆ ಬಂದ ಚೆಲುವೆ, ಮೊದಲ ಧಾರಾವಾಹಿಯಲ್ಲಿಯೇ ಸೀರಿಯಲ್ ಪ್ರಿಯರ ಮನ ಸೆಳೆದರು. ನಂತ್ರ ರಾಧಾ ರಮಣ ಧಾರಾವಾಹಿಯ ಅವನಿಯಾಗಿ ಬಣ್ಣ ಹಚ್ಚಿದರು.

ತಮ್ಮ ಬಣ್ಣದ ಲೋಕದ ಅನುಭವವನ್ನು ಇನ್ಸ್ಟಾಗ್ರಾಮ್ನಲ್ಲಿ ಮೆಲುಕು ಹಾಕಿರುವ ಅವನಿ, "ಆರು ವರುಷಗಳ ಹಿಂದೆ ಈ ಪಯಣ ಆರಂಭಿಸಿದೆ. ಈ ಸುಮಧುರ ಪಯಣದಲ್ಲಿ ಹಲವಾರು ಏರಿಳಿತಗಳಿದ್ದವು. ಆದರೆ ನೀವು ತೋರಿಸಿದ ಪ್ರೀತಿಗೆ ನಾನೆಂದಿಗೂ ಕೃತಜ್ಞಳು. ಧನ್ಯವಾದ" ಎಂದು ಬರೆದುಕೊಂಡಿದ್ದಾರೆ. ರಾಘವೇಂದ್ರ ಹುಣಸೂರು ಸರ್ ನಾನು ಈ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲೆ ಎಂದು ನಂಬಿದರು. ಅವರ ನಂಬಿಕೆ ಹುಸಿಯಾಗಿಲ್ಲ ಎಂದು ಬರೆದುಕೊಂಡಿದ್ದಾರೆ.

