ಈ ವಾರಾಂತ್ಯದಲ್ಲಿ ಖ್ಯಾತ ನಿರೂಪಕಿ ಅನುಶ್ರೀ ಅವರೊಂದಿಗೆ ಕಾಫಿ ಕುಡಿಯಲಿರುವ ವಿಐಪಿ ಯಾರು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದ್ದು, ಅದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಎಂದು ತಿಳಿದುಬಂದಿದೆ.
![Appu is participating in coffee with Anu show](https://etvbharatimages.akamaized.net/etvbharat/prod-images/kn-bng-01-anushree-puneeth-photo-ka10018_29052020104539_2905f_1590729339_39.jpg)
ಕನ್ನಡ ಕಿರುತೆರೆ ನಿರೂಪಕಿ ಅನುಶ್ರೀ ಸಾರಥ್ಯದಲ್ಲಿ ಮೂಡಿಬರುತ್ತಿರುವ ಹೊಚ್ಚ ಹೊಸ ಕಾರ್ಯಕ್ರಮ ಕಾಫಿ ವಿತ್ ಅನು. ಝೀ ಕನ್ನಡ ವಾಹಿನಿಯಲ್ಲಿ ವಾರಾಂತ್ಯದ ವೇಳೆ ಪ್ರಸಾರವಾಗುವ ಈ ಕಾರ್ಯಕ್ರಮವನ್ನು ಜನ ಮೆಚ್ಚಿಕೊಂಡಿದ್ದರು. ಮಾತಿನ ಮಲ್ಲಿ, ಚಿನಕುರಳಿ ಅನುಶ್ರೀ ಅವರ ಸೊಗಸಾದ ನಿರೂಪಣೆ ವೀಕ್ಷಕರನ್ನು ಸೆಳೆದಿತ್ತು.
ಕಾಫಿ ವಿತ್ ಅನು ಕಾರ್ಯಕ್ರಮದಲ್ಲಿ ಈಗಾಗಲೇ ಎವೆರ್ ಸ್ಮಾರ್ಟ್ ರಮೇಶ್ ಅರವಿಂದ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಪಾಲ್ಗೊಂಡು ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ. ಇದೀಗ ಈ ವಾರಾಂತ್ಯದಲ್ಲಿ ಅನು ಗೆಸ್ಟ್ ಆಗಿ ಆಗಮಿಸಿ ವೀಕ್ಷಕರ ಮನೆ ಮನ ತಲುಪಲಿರುವವರು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್.
ಇನ್ನು ಪವರ್ ಸ್ಟಾರ್ ಹೊರತಾಗಿ ಈ ವಾರ ಕಾಣಿಸಿಕೊಳ್ಳುತ್ತಿರುವ ಮತ್ತೋರ್ವ ಅತಿಥಿ ಚುಟು ಚುಟು ಬೆಡಗಿ ಶಾನ್ವಿ ಶ್ರೀವಾತ್ಸವ್. ಒಟ್ಟಿನಲ್ಲಿ ಈ ವಿಶೇಷ ಕಾರ್ಯಕ್ರಮ ವೀಕ್ಷಕರಿಗೆ ಮನರಂಜನೆ ತರುವುದಂತೂ ನಿಜ.