'ಮಫ್ತಿ' ಸಿನಿಮಾ ನಂತರ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಭರಾಟೆ' ಸಿನಿಮಾ ಇಂದು ರಾಜ್ಯಾದ್ಯಂತ 300 ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಈ ಸಿನಿಮಾ ಶೂಟಿಂಗ್ ಆರಂಭವಾದಾಗಿನಿಂದ ಮುರಳಿ ಈ ಚಿತ್ರದಲ್ಲಿ ಯಾವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವಿಷಯ ರಿವೀಲ್ ಆಗಿರಲಿಲ್ಲ, ಈಗ ಅದಕ್ಕೆ ತೆರೆಬಿದ್ದಿದೆ.
'ಭರಾಟೆ ' ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಶ್ರೀಮುರಳಿ ಡಬಲ್ ರೋಲ್ನಲ್ಲಿ ನಟಿಸಿದ್ದಾರೆ. ಇದು ನಿಜಕ್ಕೂ ಶ್ರೀಮುರಳಿ ಅಭಿಮಾನಿಗಳಿಗೆ ಆಶ್ಚರ್ಯದ ವಿಷಯ. ಚಿತ್ರದಲ್ಲಿ ಶ್ರೀಮುರಳಿ ಯಂಗ್ ಹಾಗೂ ಎನರ್ಜಿಟಿಕ್ ಹೀರೋ ರೋಲ್ ಜೊತೆಗೆ ರತ್ನಾಕರ ಎಂಬ ವಯೋವೃದ್ಧನ ಪಾತ್ರದಲ್ಲಿ ಕೂಡಾ ಅಬ್ಬರಿಸಿದ್ದಾರೆ. ಈ ಪಾತ್ರಕ್ಕೆ ಸಂಬಂಧಿಸಿದ ಕೆಲವು ಪೋಟೋಗಳು ಈಗ ರಿವೀಲ್ ಆಗಿವೆ. ಈ ಪೋಟೋಗಳನ್ನು ನೋಡುತ್ತಿದ್ರೆ ಇವರು ನಿಜವಾಗಲೂ ಶ್ರೀಮುರಳಿನಾ ಎಂಬ ಅನುಮಾನ ಉಂಟಾಗುವುದು ಗ್ಯಾರಂಟಿ. ಆದರೆ, ಚಿತ್ರದಲ್ಲಿ ಶ್ರೀಮುರಳಿ ಡಬ್ಬಲ್ ಆ್ಯಕ್ಟಿಂಗ್ ಪ್ರೇಕ್ಷಕರಿಗೆ ಬಹಳ ಮೆಚ್ಚುಗೆಯಾಗಿದೆಯಂತೆ. 'ಭರಾಟೆ' ಚಿತ್ರಕ್ಕೆ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.