ಕಳೆದ ವಾರವಷ್ಟೇ ಎರಡು ಬಡಾವಣೆಗಳ ಸ್ವಚ್ಛತೆಯ ಕಾರ್ಯ ನಡೆಯಲು ಕಾರಣರಾಗಿದ್ದ 'ಜೊತೆ ಜೊತೆಯಲಿ' ಧಾರಾವಾಹಿಯ ಜನಪ್ರಿಯ ನಟ ಅನಿರುದ್ಧ್ ಇದೀಗ ಮತ್ತೆ ಸ್ವಚ್ಛತೆಗೆ ಎಲ್ಲರೂ ಮುಂದಾಗುವಂತೆ ಕರೆ ನೀಡಿದ್ದಾರೆ.
ನಟ ಅನಿರುದ್ಧ್ ಸಾಮಾಜಿಕ ಜಾಲತಾಣದಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಕಸದ ರಾಶಿಯ ಚಿತ್ರವನ್ನು ಹಂಚಿಕೊಂಡಿದ್ದರು. ಎರಡೇ ದಿನದಲ್ಲಿ ಆ ಕಸವಿರುವ ಜಾಗವನ್ನು ಬಿಬಿಎಂಪಿಯ ಸಿಬ್ಬಂದಿಗಳು ಸ್ವಚ್ಛಗೊಳಿಸಿದ್ದರು. ಇದಕ್ಕೆ ಅನಿರುದ್ಧ್ ಕೂಡ ಸಿಬ್ಬಂದಿಗಳನ್ನು ಅಭಿನಂದಿಸಿದ್ದರು. ಹೀಗಾಗಿ, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಒತ್ತು ನೀಡಬೇಕೆಂದು ಕೋರಿದ್ದಾರೆ.
![Aniruddh, who launched a campaign on cleanliness on the social networking site](https://etvbharatimages.akamaized.net/etvbharat/prod-images/kn-bng-03-anirudh-clean-photo-ka10018_18112020164751_1811f_1605698271_627.jpg)
“ಹರ್ ಹರ್ ಮಹಾದೇವ್” ಅಂದ್ರೆ ‘ಹರ್ ಏಕ್ ಮಹಾದೇವ್’ ಅಂತ.... ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಈಶ್ವರ ಇದ್ದಾನೆ. ಶಿವನೇ ಶಕ್ತಿ... ನಮ್ಮಲ್ಲಿರೋ ಶಕ್ತಿಯ ಅರಿವು ನಮಗಿರಲಿ. ನಮ್ಮಲ್ಲಿರೋ ಶಕ್ತಿಯಿಂದ ನಾವು ಸಮಾಜದಲ್ಲಿ ಸ್ಫೂರ್ತಿದಾಯಕ ಕೆಲಸಗಳನ್ನು ಮಾಡಬಹುದು. ನನ್ನ ಒಂದು ಪೋಸ್ಟ್‌ನಿಂದ ಮತ್ತು ಬಿಬಿಎಂಪಿಯ ತಕ್ಷಣದ ಪ್ರತಿಕ್ರಿಯೆ ಹಾಗೂ ಕೆಲಸದಿಂದ 2 ಬಡಾವಣೆಯ 2 ಸ್ಥಳಗಳು ಸ್ವಚ್ಛಗೊಂಡಿವೆ. ಇನ್ನೂ ನಾವೆಲ್ಲರೂ ಪ್ರಯತ್ನ ಪಟ್ಟರೆ?
![Aniruddh, who launched a campaign on cleanliness on the social networking site](https://etvbharatimages.akamaized.net/etvbharat/prod-images/kn-bng-03-anirudh-clean-photo-ka10018_18112020164751_1811f_1605698271_251.jpg)
ತಾವೆಲ್ಲರೂ ತಮ್ಮ ತಮ್ಮ ಬಡಾವಣೆಯನ್ನ ಸ್ವಚ್ಛ ಮಾಡಿಸೋದಕ್ಕೆ ಸ್ಥಳೀಯ ಅಧಿಕಾರಿಗಳ ಜೊತೆ ಪ್ರಯತ್ನ ಪಡಿ, ಅದಕ್ಕೆ ಯಶಸ್ಸು ಸಿಕ್ಕದ್ರೆ, ಇಲ್ಲಿ ನನ್ನ ಫೇಸ್‌ಬುಕ್ ಪೇಜ್‌ನಲ್ಲಿ ಅವುಗಳ ಛಾಯಾಚಿತ್ರಗಳನ್ನ ಪೋಸ್ಟ್ ಮಾಡಿ. ಇತರರಿಗೂ ಅದರಿಂದ ಪ್ರೇರಣೆ ಸಿಗತ್ತೆ. ಹಾಗೆಯೆ ಸತತ ಪ್ರಯತ್ನಗಳಾದರೂ ಯಶಸ್ಸು ಸಿಗದೆ ಇದ್ದಲ್ಲಿ ಕೂಡ, ಇಲ್ಲಿ ತಮ್ಮ ಪ್ರಯತ್ನಗಳ ದಾಖಲೆಗಳನ್ನ ಪೋಸ್ಟ್ ಮಾಡಿ, ಆಗ ನಾವೆಲ್ಲರೂ ಸೇರಿ ಪ್ರಯತ್ನ ಪಡೋಣ - ಹೀಗೆಂದು ಸಾಮಾಜಿಕ ಜಾಲತಾಣದಲ್ಲಿ ನಟ ಅನಿರುದ್ಧ್ ಹೇಳಿಕೊಂಡಿದ್ದಾರೆ. ಇವರ ಕಳಕಳಿಗೆ ಅಭಿಮಾನಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
- " class="align-text-top noRightClick twitterSection" data="
">