ಬಹುಶಃ 2020ರಲ್ಲಿ ತಾವು ನಟಿಸಿದ ಅತಿ ಹೆಚ್ಚು ಸಿನಿಮಾ ಬಿಡುಗಡೆ ಆಗಿರುವ ನಾಯಕಿ ಯಾರು ಅಂದರೆ ಅದು ಅಮೃತ ಅಯ್ಯಂಗಾರ್ ಆಗಿರುತ್ತಾರೆ. ಅವರು ಈ ಮೂರು ತಿಂಗಳಿನಲ್ಲಿ ಲವ್ ಮಾಕ್ ಟೈಲ್ನಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ, ಧನಂಜಯ್ ಪ್ರೇಯಸಿಯಾಗಿ ‘ಪಾಪ್ ಕಾರ್ನ್ ಮಂಕಿ ಟೈಗರ್, ‘ಶಿವಾರ್ಜುನ’ ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನು ಶಿವಾರ್ಜುನ ಚಿತ್ರದಲ್ಲಿ ಅಮೃತ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿಗರೇಟ್ ಸೇದುತ್ತಾರೆ. ನಾಯಕನನ್ನು ಪೀಡಿಸಿ ಪ್ರೀತಿ ಮಾಡು ಅಂತ ಕೇಳುತ್ತಾರೆ. ಕೊನೆಗೆ ನಾಯಕನನ್ನು ದಕ್ಕಿಸಿಕೊಳ್ಳುತ್ತಾರೆ.
ಇನ್ನು ಅಮೃತ ಅಯ್ಯಂಗಾರ್ ಅಭಿನಯದ ‘ಬಡವ ರಾಸ್ಕಲ್’ ಮತ್ತು ಇನ್ನೊಂದು ಹೆಸರಿಡದ ಚಿತ್ರ ಸಿದ್ಧವಾಗುತ್ತಿದೆ. ಇನ್ನೆರಡು ಸಿನಿಮಾಗಳಿಗೆ ಮಾತುಕತೆ ನಡೆಯುತ್ತಿದೆಯಂತೆ.

ಅಂದಹಾಗೆ ಅಮೃತ ಅಯ್ಯಂಗಾರ್ 2016ರಲ್ಲಿ ನಟಿಸಿದ ‘ಸಿಂಹ ಹಾಕಿದ ಹೆಜ್ಜೆ’ ಹಾಗೂ ‘ಅನುಷ್ಕ’ ಯಶಸ್ಸು ತಂದುಕೊಡಲಿಲ್ಲ. ಒಟ್ಟಿನಲ್ಲಿ ಮೂರು ತಿಂಗಳಿನಲ್ಲಿ ಅಮೃತ ಅಯ್ಯಂಗಾರ್ ಅಭಿನಯಿಸಿದ ಮೂರು ಸಿನಿಮಗಳು ಬಿಡುಗಡೆಯಾಗುವ ಮೂಲಕ ಒಂದೊಳ್ಳೆ ಹೆಸರು ತಂದುಕೊಟ್ಟಿವೆ.
