ಬಾಲಿವುಡ್ ಸಿನಿ ರಂಗದಲ್ಲಿ ಗಾಸಿಪ್ ಸುದ್ದಿಗಳಿಗೆ ಬರವೇ ಇಲ್ಲ. ಯಾರಾದ್ರು ಇಬ್ಬರು ಸ್ಟಾರ್ ನಟರು ಒಟ್ಟಿಗೆ ಇದ್ದು ಮಾತುಕತೆ ನಡೆಸಿದ್ರೆ ಸಾಕು. ಅಲ್ಲಿ ಏನೋ ನಡೆಯುತ್ತಿದೆ ಎಂದು ಹೇಳಲಾಗುತ್ತದೆ. ಇನ್ನು ಕೆಲವು ಸ್ಟಾರ್ಗಳು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್ಗಳು ಕೂಡ ತಮ್ಮ ಫ್ಯಾನ್ಸ್ ಮನದಲ್ಲಿ ಗಾಸಿಪ್ ಕ್ರಿಯೇಟ್ ಮಾಡ್ತಾನೇ ಇರ್ತವೆ. ಈ ರೀತಿ ಹೇಳೋದಿಕ್ಕೆ ಕಾರಣ ಇತ್ತೀಚೆಗೆ ಅಮಿತಾಬ್ ಮಾಡಿರುವ ಆ ಇನ್ಸ್ಟಾಗ್ರಾಂ ಪೋಸ್ಟ್.
ಹೌದು, ಅಮಿತಾಬ್ ಮನೆಯಲ್ಲಿ ಇತ್ತೀಚೆಗೆ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯ್ತು. ಬಿಗ್ ಬಿ ಪ್ರತೀ ವರ್ಷ ಕೂಡ ಈ ಹಬ್ಬಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಸ್ನೇಹಿತರನ್ನು ಆಹ್ವಾನಿಸುತ್ತಾರೆ. ಈ ಬಾರಿ ನಡೆದ ದೀಪಾಳಿಗೆ ಶಾರುಖ್ ಖಾನ್ ಮತ್ತು ಶಾರುಖ್ ಪತ್ನಿ ಗೌರಿಯನ್ನು ಆಹ್ವನಿಸಲಾಗಿತ್ತು. ಈ ವೇಳೆ ಅಮಿತಾಬ್ ಬಚ್ಚನ್ ಶಾರುಖ್ ಮತ್ತು ಗೌರಿ ಜೊತೆ ಸಪರೇಟ್ ಆಗಿ ಮಾತುಕತೆ ನಡೆಸಿದ್ದಾರೆ. ಹೀಗಂತ ನಾವ್ ಹೇಳ್ತಿಲ್ಲ. ಇದನ್ನು ಸ್ವತಃ ಅಮಿತಾಬ್ ಬಚ್ಚನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
- View this post on Instagram
SHAHRUKH Gauri and the self in some serious discussions at Diwali .. personal obviously .. 😜😜
">
ಈ ಬಗ್ಗೆ ಪೋಸ್ಟ್ ಮಾಡಿರುವ ಅಮಿತಾಬ್ ಬಚ್ಚನ್, ಇದು ಶಾರುಖ್ ಖಾನ್, ಗೌರಿ ಮತ್ತು ನನ್ನ ನಡುವೆ ನಡೆದ ಸೀರಿಯಸ್ ಚರ್ಚೆ. ಇದು ಪರ್ಸನಲ್ ಎಂದು ಬರೆದಿದ್ದು, ಇದಕ್ಕೆ ಆ ಮೂರು ಜನ ಇರುವ ಫೋಟೋ ಹಾಕಿದ್ದಾರೆ.
ಈ ಪೋಸ್ಟ್ನಿಂದ ಶಾರೂಖ್ ಮತ್ತು ಬಿಗ್ ಬಿ ಫ್ಯಾನ್ಸ್ ನಡುವೆ ವ್ಯಾಪಕ ಚರ್ಚೆಗಳಾಗುತ್ತಿದ್ದು, ಈ ಇಬ್ಬರು ಮೇರು ನಟರು ಮತ್ತೆ ಒಂದಾಗಿ ಸಿನಿಮಾ ಮಾಡುತ್ತಾರಾ ಎಂಬ ವದಂತಿಗಳು ಹರಿದಾಡುತ್ತಿದೆ. ಇನ್ನು ಶಾರುಖ್ ಮತ್ತು ಅಮಿತಾಬ್ ಬಚ್ಚನ್, ಕಭಿ ಖುಶಿ ಕಭಿ ಗಮ್, ಮಹಬತೇ, ಭೂತನಾಥ್, ಪೆಹೆಲಿ ಸಿನಿಮಾಗಳಿಲ್ಲಿ ಜೊತೆಯಾಗಿ ನಟಿಸಿದ್ದಾರೆ.
ಇದೀಗ ಅಮಿತಾಬ್ ಮತ್ತು ಶಾರುಖ್ ನಡೆಸಿರುವ ಈ ಚರ್ಚೆ ಮುಂದಿನ ಹೊಸ ಸಿನಿಮಾಕ್ಕೆ ಕಾರಣವಾಗುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.