ETV Bharat / sitara

ಸುಂದರವಾಗಿ ಅಲಂಕಾರಗೊಂಡು ಕೈಯಲ್ಲಿ ಪೊರಕೆ ಹಿಡಿದಿರುವ ಅಮಲಾ ಪೌಲ್​​..! ಕಾರಣ ಏನು? - undefined

ಅಮಲಾ ಪೌಲ್​ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಆಡೈ' ಸಿನಿಮಾದ ಮತ್ತೊಂದು ಪೋಸ್ಟರ್ ರಿವೀಲ್ ಆಗಿದ್ದು, ನಾಳೆ ಚಿತ್ರದ ಟ್ರೇಲರನ್ನು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಬಿಡುಗಡೆ ಮಾಡಲಿದ್ದಾರೆ.

ಅಮಲಾ ಪೌಲ್​​
author img

By

Published : Jul 5, 2019, 1:27 PM IST

ಇತ್ತಿಚೆಗೆ ಬಿಡುಗಡೆಯಾದ 'ಆಡೈ' ಸಿನಿಮಾ ಟೀಸರ್​​​ನಲ್ಲಿ ಅಮಲಾ ಪೌಲ್ ಬೋಲ್ಡ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಚಿತ್ರದ ಪೋಸ್ಟರ್​​ನಲ್ಲಿ ಕೂಡಾ ಅಮಲಾ ಅದೇ ರೀತಿ ಕಾಣಿಸಿಕೊಂಡಿದ್ದಾರೆ.

amala paul
'ಆಡೈ' ಚಿತ್ರದ ಹೊಸ ಪೋಸ್ಟರ್

'ಆಡೈ' ಎಂದರೆ ಬಟ್ಟೆ ಎಂದರ್ಥ. ಈ ಟೈಟಲ್ ಮೂಲಕ ನಿರ್ದೇಶಕರು ಸಿನಿಮಾದಲ್ಲಿ ಏನು ಹೇಳಲು ಹೊರಟಿದ್ದಾರೋ ಕಾದುನೋಡಬೇಕು. ಟೀಸರ್ ನೋಡಿದ ಬಹಳಷ್ಟು ಸೆಲಬ್ರಿಟಿಗಳು ಆಶ್ಚರ್ಯಗೊಂಡಿದ್ದರು. ಇಂತಹ ಪಾತ್ರ ಮಾಡಲು ಸಾಕಷ್ಟು ಧೈರ್ಯ ಕೂಡಾ ಇರಬೇಕು ಎಂದು ಅಮಲಾರನ್ನು ಹೊಗಳಿದ್ದರು. ಇದೀಗ ಚಿತ್ರದ ಹೊಸ ಪೋಸ್ಟರ್ ಕೂಡಾ ರಿವೀಲ್ ಆಗಿದ್ದು ಈ ಪೋಸ್ಟರ್​ನಲ್ಲಿ ಅಮಲಾ ಪೌಲ್ ಕೆಂಪು ಸೀರೆ, ಒಡವೆ ಧರಿಸಿ, ಸುಂದರವಾಗಿ ಅಲಂಕರಿಸಿಕೊಂಡು ಕೈಯಲ್ಲಿ ಪೊರಕೆ ಹಿಡಿದು ನಿಂತಿದ್ದಾರೆ. ಈ ಪೋಸ್ಟರ್ ಕೂಡಾ ಭಾರೀ ಕುತೂಹಲ ಹುಟ್ಟಿಸಿದೆ.

amala paul
'ಆಡೈ' ಸಿನಿಮಾದಲ್ಲಿ ಅಮಲಾ ಪೌಲ್​​ ಬೋಲ್ಡ್ ಲುಕ್

ರತ್ನ ಕುಮಾರ್ ಕಥೆ ಬರೆದು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ವಿ ಸ್ಟುಡಿಯೋಸ್ ಬ್ಯಾನರ್ ಅಡಿ ವಿಜಿ ಸುಬ್ರಮಣಿಯನ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ 'ಆಡೈ' ಟೀಸರನ್ನು ಬಿಡುಗಡೆ ಮಾಡಿದ್ದರು. ನಾಳೆ ನಿರ್ದೇಶಕ ಅನುರಾಗ್ ಕಶ್ಯಪ್ ಸಿನಿಮಾದ ಅಫಿಶಿಯಲ್ ಟ್ರೇಲರ್ ಬಿಡುಗಡೆ ಮಾಡುತ್ತಿದ್ದಾರೆ. ಸಿನಿಮಾ ಜುಲೈ 19 ರಂದು ಬಿಡುಗಡೆಯಾಗಲಿದೆ.

Intro:Body:

amala paul 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.