ETV Bharat / sitara

ಸಂಗೀತ ನಿರ್ದೇಶನದ ಜೊತೆಗೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ! - ಸುಜಯ್ ಶಾಸ್ತ್ರಿ ನಿರ್ದೇಶನದ ಸಿನಿಮಾ ಎಲ್ರ ಕಾಲೆಳಿಯುತ್ತೆ ಕಾಲ

ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಇದೀಗ ಹೀರೋ ಆಗೋದಿಕ್ಕೆ ಹೊರಟಿದ್ದಾರೆ. ಎಲ್ರ ಕಾಲೆಳೆಯುತ್ತೆ ಕಾಲ ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ನಿರ್ದೇಶಕ ಸುಜಯ್ ಶಾಸ್ತ್ರಿ ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

Along with music direction Chandan Shetty enter into the acting
ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ
author img

By

Published : Feb 3, 2022, 5:48 PM IST

ತ್ರಿಪೆಗ್, ಪಾರ್ಟಿ ಪ್ರೀಕ್, ಲಕ ಲಕ ಲ್ಯಾಂಬೋರ್ಗಿನಿ ಸೇರಿದಂತೆ ಹಲವು ಆಲ್ಬಂ ಹಾಡುಗಳ ಮೂಲಕ ತನ್ನದೇ ಐಡೆಂಟಿಟಿಯನ್ನ ಹೊಂದಿರುವ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ. ಸದ್ಯ ಆಲ್ಬಂ ಸಾಂಗ್ ಮತ್ತು ಸಿನಿಮಾಗಳಿಗೆ ಮ್ಯೂಜಿಕ್ ಮಾಡ್ತಾ ಇರೋ ಚಂದನ್ ಶೆಟ್ಟಿ, ಈಗ ಒಂದು ಕೈ ನೋಡೆ ಬಿಡೋಣ ಅಂತಾ ಹೀರೋ ಆಗೋದಿಕ್ಕೆ ಹೊರಟಿದ್ದಾರೆ.

ಈ ಚಿತ್ರಕ್ಕೆ 'ಎಲ್ರ ಕಾಲೆಳೆಯುತ್ತೆ ಕಾಲ' ಎಂಬ ಕ್ಯಾಚೀ ಟೈಟಲ್ ಇಟ್ಟಿದ್ದಾರೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಧರ್ಮಗಿರಿ ಶ್ರೀಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಮೈಸೂರಿನ ಶ್ರೀ ಅರ್ಜುನ ಅವಧೂತ ಮಹಾರಾಜರು ಚಿತ್ರದ ಪ್ರಥಮ‌ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಕರ್ನಾಟಕದಲ್ಲಿ ಕನ್ನಡತನ ಮರೆಯಾಗುತ್ತಿದೆ. ನಾವು ಹೇಗೆ ಬೇರೆಭಾಷೆಗಳ ಚಿತ್ರಗಳನ್ನು ಸಬ್ ಟೈಟಲ್ ಮೂಲಕ ನೋಡುತ್ತೀವಲ್ಲಾ, ಹಾಗೆ ಬೇರೆ ಭಾಷೆಗಳಲ್ಲೂ ನಮ್ಮ ಕನ್ನಡ ಚಿತ್ರಗಳು ಬಿಡುಗಡೆಯಾಗಲಿ. ಅವರು ನಮ್ಮ ಹಾಗೆ ನೋಡಲಿ. ಈ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಅರ್ಜುನ್ ಅವಧೂತರು ಆಶೀರ್ವದಿಸಿದರು.

ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ

ತಮ್ಮ ವಿಭಿನ್ನ ಹಾಸ್ಯ ಪಾತ್ರಗಳ ಮೂಲಕ ಹೆಸರಾಗಿರುವ, ಸುಜಯ್ ಶಾಸ್ತ್ರಿ ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕ ಸುಜಯ್ ಶಾಸ್ತ್ರಿ ಹೇಳುವ ಹಾಗೇ ನಾನು ಹಾಗೂ ರಾಜ್ ಗುರು ಸೇರಿ ಕಥೆ ಮಾಡಿಕೊಂಡೆವು. ನಿರ್ಮಾಪಕ ಗೋವಿಂದರಾಜು ಅವರ ಮುಂದೆ ಕಥೆ ಹೇಳಿದೆವು. ನಮ್ಮ ಕಥೆಯನ್ನು ಮೆಚ್ಚಿದ ಅವರು ಕೊರೊನಾ ಕಡಿಮೆಯಾದ ಮೇಲೆ ಚಿತ್ರ ಆರಂಭಿಸೋಣ ಎಂದಿದ್ದರು. ಈಗ ಚಿತ್ರ ಆರಂಭಾಗಿದೆ. 1980 ರಿಂದ 90ರ ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ಕಥೆಯ ಬಗ್ಗೆ ಜಾಸ್ತಿ ಹೇಳುವುದಿಲ್ಲ. ಈ ಚಿತ್ರದ ನಯಕನಾಗಿ ಚಂದನ್ ಶೆಟ್ಟಿ, ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ಅಭಿನಯಿಸುತ್ತಿದ್ದಾರೆ. ತಾರಾ, ಮಂಡ್ಯ ರಮೇಶ್, ಮಂಜು ಪಾವಗಡ, ನಾಗರಾಜ್ ಮೂರ್ತಿ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ. ನಾನು ಕೂಡ ಅಭಿನಯಿಸುತ್ತಿದ್ದೀನಿ ಎಂದು ನಿರ್ದೇಶಕ ಸುಜಯ್ ಶಾಸ್ತ್ರಿ ಹೇಳಿದ್ದಾರೆ.

ನಾಯಕ ನಟ ಚಂದನ್ ಶೆಟ್ಟಿ ಮಾತನಾಡಿ, ಇಷ್ಟು ದಿನ ನನ್ನ ಹಾಡು, ಸಂಗೀತಕ್ಕೆ ನಿಮ್ಮ ಬೆಂಬಲ ಸಿಕ್ಕಿದೆ. ಈಗ ನಾಯಕನಟನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದೇನೆ. ವಿಜಯ್ ನನ್ನ ಪಾತ್ರದ ಹೆಸರು. ಈ ಚಿತ್ರದಲ್ಲಿ ಕಾಲೇಜು ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಚಂದನ್ ಶೆಟ್ಟಿ ಜೋಡಿಯಾಗಿ ಯುವ ನಟಿ ಅರ್ಚನಾ ಕೊಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದರು.

ಇದನ್ನೂ ಓದಿ: ಅಪ್ಪು ಸಮಾಧಿಗೆ ಭೇಟಿ ನೀಡಿ ಅಲ್ಲು ನಮನ: ಪುನೀತ್​ ಜೊತೆ ಕೊನೆಯ ಮಾತು ನೆನೆದ ಸ್ಟೈಲಿಶ್​ ಸ್ಟಾರ್

ರಿಯಾಲಿಟಿ ಶೋ ಮೂಲಕ ನನಗೆ ಸುಜಯ್ ಪರಿಚಯವಾಗಿದೆ. ನನ್ನ ಚಿತ್ರವೊಂದರಲ್ಲಿ ನೀವು ಅಭಿನಯಿಸಬೇಕೆಂದರು. ಕಥೆ ಕೇಳದೆ ಒಪ್ಪಿಕೊಂಡಿದ್ದೇನೆ. ನನ್ನ ಹಾಗೂ ಸುಜಯ್ ಶಾಸ್ತ್ರಿ ಕಾಂಬಿನೇಶನ್​ನಲ್ಲಿ ಮತ್ತೊಂದು ಚಿತ್ರ ಕೂಡ ಸದ್ಯದ್ರಲ್ಲೇ ಸೆಟ್ಟೇರಲಿದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ನಟಿ ತಾರಾ ಹೇಳಿದ್ದಾರೆ.

ಈ ಚಿತ್ರಕ್ಕೆ ರಾಜಗುರು ಕಥೆ, ಸಂಭಾಷಣೆ ಬರೆದಿದ್ದು, ಪ್ರದೀಪ - ಪ್ರವೀಣ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಉಷಾ ಗೋವಿಂದರಾಜು ನಿರ್ಮಾಣದ ಈ ಚಿತ್ರಕ್ಕೆ ವಿಶ್ವಜಿತ್ ರಾವ್ ಅವರ ಛಾಯಾಗ್ರಹಣವಿದೆ. ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿದ್ದ ಕಾರ್ನಿ ಹಾಗೂ ಕೃಷ್ಣ ಟಾಕೀಸ್ ಚಿತ್ರಗಳ ಬಳಿಕ ನಿರ್ಮಾಪಕ ಗೋವಿಂದರಾಜು ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಸಂಗೀತದ ಮೂಲಕ ಕನ್ನಡಿಗರ ಮನಗೆದ್ದಿದ್ದ ಚಂದನ್ ಶೆಟ್ಟಿ ನಾಯಕ ನಟನಾಗಿ ಸಕ್ಸಸ್ ಆಗ್ತಾರ ಅನ್ನೋದು ಚಿತ್ರ ತೆರೆಗೆ ಬಂದ ಮೇಲೆ ಗೊತ್ತಾಗಲಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.