ETV Bharat / sitara

ಬಿಟೌನ್​​ನಲ್ಲಿ ಮತ್ತೊಂದು ಗಟ್ಟಿಮೇಳ: ಮದುವೆ ಆಗ್ತಿದ್ದಾರೆ ವರುಣ್​ ಧವನ್​​

ನಟ ವರುಣ್​ ಧವನ್​ ಮತ್ತು ನತಾಶಾ ಇದೇ ತಿಂಗಳ 24ರಂದು ಹಸೆಮಣೆ ಏರುವ ಪ್ಲಾನ್​ ಮಾಡಿದ್ದಾರೆ.

author img

By

Published : Jan 16, 2021, 12:10 PM IST

ಬಿಟೌನ್​​ನಲ್ಲಿ ಮತ್ತೊಂದು ಗಟ್ಟಿಮೇಳ : ಮದುವೆ ಆಗ್ತಿದ್ದಾರೆ ವರುಣ್​ ಧವನ್​​

ಬಾಲಿವುಡ್​​ ತಾರಾಗಣದಲ್ಲಿ ಇದೀಗ ಮತ್ತೊಂದು ಗಟ್ಟಿಮೇಳದ ಸದ್ದು ಕೇಳಲಿದೆ. ನಟ ವರುಣ್​ ಧವನ್​ ಮತ್ತು ನತಾಶಾ ಇದೇ ತಿಂಗಳ 24ರಂದು ಹಸೆಮಣೆ ಏರುವ ಪ್ಲಾನ್​ ಮಾಡಿದ್ದಾರೆ.

ಈ ಜೋಡಿ ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದು ಮದುವೆಯಾಗುತ್ತಾರೆ ಎಂಬ ಸುದ್ದಿ ಆಗಾಗ ವೈರಲ್​​ ಆಗುತ್ತಿದ್ದಾರೆ. ಈ ಬಗ್ಗೆ ಇದ್ದ ಚರ್ಚೆ ಕೊನೇ ಹಂತಕ್ಕೆ ತಲುಪಿದ್ದು ಕುಟುಂಬಸ್ಥರ ಸಮ್ಮುಖದಲ್ಲಿ ಆಲಿಬಾಗ್​​​ನಲ್ಲಿ ಮದುವೆ ನಡೆಯಲಿದೆ.

ಮತ್ತೊಂದು ವಿಚಾರ ಏನಂದ್ರೆ ಸದ್ಯ ಕೊರೊನಾ ಹಾವಳಿ ಇರುವುದರಿಂದ ಅತೀ ಕಡಿಮೆ ಜನರು ಮದುವೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಇನ್ನು ನತಾಶಾ ಫ್ಯಾಷನ್ ಡಿಸೈನರ್ ಆಗಿದ್ದು, ಮದುವೆ ಉಡುಗೆಯನ್ನು ಅವರೇ ಡಿಸೈನ್ ಮಾಡಿದ್ದಾರೆ ಎನ್ನಲಾಗಿದೆ.

ಮದುವೆ ಕಾರ್ಯಕ್ರಮಗಳು ಜೋರಾಗಿದ್ದು, ಬಾಲಿವುಡ್ ಶೈಲಿಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೆಹೇಂದಿ ಕಾರ್ಯಕ್ರಮ ಕೂಡ ಇರಲಿದ್ದು, ಇದಾದ ಮೇಲೆ ಸುಮಾರು 200 ಅತಿಥಿಗಳಿಗೆ ಕಾಕ್ಟೈಲ್ ನೈಟ್​​​ ಇರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.