ಕನ್ನಡ ಚಿತ್ರರಂಗ ಅಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನ ಮಾಡುತ್ತಿರುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮೇಲೆ ತೆರಿಗೆ ವಂಚನೆ ಆರೋಪ ಕೇಳಿ ಬಂದಿದೆ.
ರಾಕ್‌ಲೈನ್ ವೆಂಕಟೇಶ್ ಒಡೆತನದ ರಾಕ್‌ಲೈನ್ ಮಾಲ್ನಿಂದ 8.5 ಕೋಟಿ ರೂ. ಆಸ್ತಿ ತೆರಿಗೆ ವಂಚನೆ ಆಗಿದೆ. ಕಟ್ಟಡ ಪ್ರದೇಶದ ವಿಸ್ತೀರ್ಣವನ್ನು 1,22,743 ಚದರ ಅಡಿ ಬದಲಿಗೆ 48,500 ಚದರ ಅಡಿ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಎನ್ ಆರ್ ರಮೇಶ್, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹಾಗೂ ಬಿಎಂಟಿಎಫ್ಗೆ ದೂರು ಸಲ್ಲಿಸಿದ್ದಾರೆ.
ಈ ಸಂಬಂಧ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದು, ಎನ್ ಆರ್ ರಮೇಶ್ ಯಾರು ಅನ್ನೋದೆ ನನಗೆ ಗೊತ್ತಿಲ್ಲ. ನನ್ನಿಂದ ತೆರಿಗೆ ವಂಚನೆಯಾಗಿದ್ದಲ್ಲಿ ನಮ್ಮ ಮಾಲ್ ಅನ್ನ ಸರ್ವೇ ಮಾಡಲಿ. ನಾನು ಯಾವುದೇ ತೆರಿಗೆ ವಂಚನೆ ಮಾಡಿಲ್ಲ. ನನ್ನ ಮೇಲೆ ಯಾಕೆ ಈ ರೀತಿ ಆರೋಪ ಮಾಡ್ತಿದ್ದಾರೆ ಅಂತಾ ಗೊತ್ತಿಲ್ಲ ಎಂದರು.
ತನಿಖೆ ಮಾಡಲಿ ನನ್ನದು ತಪ್ಪಿದ್ದರೆ ನಾನು ತೆರಿಗೆ ಕಟ್ಟಿಲ್ಲ ಅನ್ನೋದು ಸಾಬೀತಾದ್ರೆ ಆ ಸ್ಪಾಟಲ್ಲೇ ತೆರಿಗೆ ಕಟ್ಟುವೆ. ಟಾರ್ಗೆಟ್ ಮಾಡ್ತಾ ಇದ್ದಾರೆ. ಇನ್ನು, ರಾಜಕುಮಾರ್ ಹೆಸರಲ್ಲಿ, ರಮೇಶ್ ಮತ್ತು ನಾಲ್ಕೈದು ಜನ ದೇಣಿಗೆ ಕೇಳಲು ಬಂದಿದ್ದರು. ಆಗ ನಾನು ಯಾರು ಅಂತಾ ಪ್ರಶ್ನಿಸಿದೆ. ಆದರೆ, ಅವರೇ ಎನ್ ಆರ್ ರಮೇಶ್ ಅನ್ನೋದು ಗೊತ್ತಿಲ್ಲ. ಅವರೇ ನನ್ನ ಬಗ್ಗೆ ಬೇರೆ ರೀತಿಯಲ್ಲಿ ಟಾರ್ಗೆಟ್ ಮಾಡ್ತಾ ಇದ್ದಾರೆ.
ಅವರು ನೇರವಾಗಿ ನನ್ನ ಹತ್ತಿರ ಬಂದು ಕೇಳಬಹುದಿತ್ತು ಎಂದು ರಾಕ್‌ಲೈನ್ ವೆಂಕಟೇಶ್ ಹೇಳಿದರು. ಕಾನೂನು ಪ್ರಕಾರ, ಮಾಲ್ ಅನ್ನ ಸರ್ವೇ ಮಾಡಲಿ. ಈ ಹಿಂದೆ ನಾನೇ ಸರ್ವೇ ಮಾಡೋದಕ್ಕೆ ಹೇಳಿದ್ದೆ. ಆಗ ಇದ್ದ ಟ್ಯಾಕ್ಸ್ ಆಫೀಸರ್ ನನ್ನ ಹತ್ತಿರ ಹಣ ಡಿಮ್ಯಾಂಡ್ ಮಾಡಿದರು. ಆಗ ನಾನು ಕೊಡಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ಓದಿ: 8.5 ಕೋಟಿ ರೂ. ತೆರಿಗೆ ವಂಚನೆ ಆರೋಪ: ರಾಕ್‌ಲೈನ್ ವೆಂಕಟೇಶ್ ವಿರುದ್ಧ ದೂರು