ಹೈದರಾಬಾದ್ : ಕಳೆದ ಎರಡು ವಾರಗಳ ನಂತರವೂ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಜಯಭೇರಿ ಬಾರಿಸುತ್ತಿದೆ. ಕೇವಲ 15 ಕೋಟಿ ಬಜೆಟ್‌ನ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಗಳಿಸುವ ಮೂಲಕ ಹಲವು ದಾಖಲೆಗಳನ್ನು ಮುರಿದಿದೆ. ಚಿತ್ರದ ಗಳಿಕೆ ನಿರಂತರವಾಗಿ ಹೆಚ್ಚುತ್ತಿದೆ.
ನಟ ಅಕ್ಷಯ್ ಕುಮಾರ್ ಅಭಿನಯದ 'ಬಚ್ಚನ್ ಪಾಂಡೆ' ಚಿತ್ರ ಮಾ.18ರಂದು ಬಿಡುಗಡೆಯಾಗಿದೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಕಾಶ್ಮೀರ ಫೈಲ್ಸ್‌ಗೆ ಶರಣಾಗಿದೆ. ಈ ಬಗ್ಗೆ ಅಕ್ಷಯ್ ಕುಮಾರ್ ಅವರು 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಶ್ಲಾಘಿಸಿದ್ದಾರೆ ಮತ್ತು ಅವರು ದೊಡ್ಡ ನಷ್ಟವನ್ನು ಅನುಭವಿಸಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: 'ಬಚ್ಚನ್ ಪಾಂಡೆ’ ಟ್ರೈಲರ್ ರಿಲೀಸ್: ಗ್ಯಾಂಗ್ಸ್ಟರ್ ಆಗಿ ಅಬ್ಬರಿಸಿದ ಅಕ್ಷಯ್ ಕುಮಾರ್
ಸಂದರ್ಶನವೊಂದರಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಕುರಿತು ಮಾತನಾಡಿದ ಅಕ್ಷಯ್ ಕುಮಾರ್, 'ವಿವೇಕ್ ಜಿ ಅವರು 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಮಾಡುವ ಮೂಲಕ ನಮ್ಮ ದೇಶದ ಅತ್ಯಂತ ನೋವಿನ ಸತ್ಯವನ್ನು ಮುಂದಿಟ್ಟಿದ್ದಾರೆ. ಅಂತಹ ಉಡುಗೊರೆಯಾಗಿ ಬಂದಿರುವ ಈ ಚಿತ್ರ ನನ್ನ ಚಿತ್ರ ಬಚ್ಚನ್ ಪಾಂಡೆಯನ್ನೂ ಹಿಂದಿಕ್ಕಿದೆ ಎನ್ನುವುದು ಬೇರೆ ಮಾತು ಎಂದಿದ್ದಾರೆ.
ಕೋವಿಡ್ ನಂತರ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಗಳಿಸಿದ ಮೊದಲ ಹಿಂದಿ ಚಲನಚಿತ್ರವಾಗಿದೆ. ಈ ರೇಸ್‌ನಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ಸೂರ್ಯವಂಶಿ' ಚಿತ್ರ ಕೂಡ ಹಿಂದೆ ಬಿಟ್ಟಿದೆ. ಕೊರೊನಾ ಸಾಂಕ್ರಾಮಿಕ ರೋಗದ ನಂತರ, 'ಸೂರ್ಯವಂಶಿ' ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಚಿತ್ರವಾಗಿದೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಜಯಭೇರಿ ಬಾರಿಸುತ್ತಿರುವ ಕಾರಣ ಹೆಚ್ಚು ಸ್ಕ್ರೀನ್ ಪಡೆಯುವಲ್ಲಿ 'ಬಚ್ಚನ್ ಪಾಂಡೆ' ಸಿನಿಮಾ ಹಿಂದೆ ಬಿದ್ದಿದೆ. ಚಿತ್ರದ ಗಳಿಕೆ ಸುಮಾರು 50 ಕೋಟಿಗೆ ಇಳಿದಿದೆ. ಅದೇ ಸಮಯಕ್ಕೆ ಮಾ.25ರಂದು ಎಸ್.ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರ ಕೂಡ ಥಿಯೇಟರ್ಗೆ ಲಗ್ಗೆ ಇಟ್ಟಿರುವುದರಿಂದ 'ಬಚ್ಚನ್ ಪಾಂಡೆ'ಗೆ ಭಾರಿ ಹಿನ್ನೆಡೆಯಾಗಿದೆ.
RRR ತನ್ನ ಮೊದಲ ದಿನದ ಕಲೆಕ್ಷನ್‌ನಲ್ಲಿ ಬಾಲಿವುಡ್ ಚಿತ್ರ 'ತಾನ್ಹಾಜಿ'ಯ ದಾಖಲೆಯನ್ನು ಮುರಿದಿದೆ. ವಾರಾಂತ್ಯದಲ್ಲಿ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಬಹುದು.
ಇದನ್ನೂ ಓದಿ: ₹200 ಕೋಟಿ ಕ್ಲಬ್ ಸೇರಿದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ