ETV Bharat / sitara

ಮತ್ತೆ ಗ್ರೀನ್​ ಇಂಡಿಯಾ ಚಾಲೆಂಜ್​ನಲ್ಲಿ ​ಬಾಲಿವುಡ್​ ನಟ ಅಜಯ್ ದೇವಗನ್ - ತೆಲಂಗಾಣ ರಾಷ್ಟ್ರ ಸಮಿತಿ ಸಂಸದ ಜೋಗಿನಪಲ್ಲಿ ಸಂತೋಷ್ ಕುಮಾರ್

'ಗ್ರೀನ್ ಇಂಡಿಯಾ ಚಾಲೆಂಜ್​​ ನಿಮಿತ್ತ' ಈ ಹಿಂದೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಸಿಗಳನ್ನು ನೆಟ್ಟಿದ್ದ ನಟ ಅಜಯ್ ದೇವಗನ್ ಮತ್ತೊಮ್ಮೆ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.

Ajay Devagan participated in Green India Challenge
ಮತ್ತೆ ಗ್ರೀನ್​ ಇಂಡಿಯಾ ಚಾಲೆಂಜ್​ನಲ್ಲಿ ​ಬಾಲಿವುಡ್​ ನಟ ಅಜಯ್ ದೇವಗನ್
author img

By

Published : Jan 7, 2021, 1:30 PM IST

ಹೈದರಾಬಾದ್​: ಬಾಲಿವುಡ್​ ನಟ ಅಜಯ್ ದೇವಗನ್ ಮತ್ತೊಮ್ಮೆ ಗ್ರೀನ್ ಇಂಡಿಯಾ ಚಾಲೆಂಜ್​​ ಸ್ವೀಕರಿಸಿದ್ದಾರೆ. ತೆಲಂಗಾಣದ ಯಾದಾದ್ರಿ ಭುವನೇಶ್ವರ ಜಿಲ್ಲೆಯ ಚೌತೌಪಾಲ್‌ನ ಗ್ರೀನ್ ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿ ಸಸಿಗಳನ್ನು ನೆಟ್ಟಿದ್ದಾರೆ.

ದೇವಗನ್​ಗೆ ಸಂಸದ ಜೋಗಿನಪಲ್ಲಿ ಸಂತೋಷ್ ಕುಮಾರ್ ಸಾಥ್​ ನೀಡಿದ್ದು, ಇವರಿಗೆ ಪಾರ್ಕ್​ಗೆ ಅದ್ದೂರಿ ಸ್ವಾಗತ ಕೋರಲಾಯಿತು. ಈ ಹಿಂದೆ ಕೂಡ ಅಜಯ್ ದೇವಗನ್ ಗ್ರೀನ್ ಇಂಡಿಯಾ ಚಾಲೆಂಜ್​​ ನಿಮಿತ್ತ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಸಿಗಳನ್ನು ನೆಟ್ಟಿದ್ದರು.

ಇದನ್ನೂ ಓದಿ: ಅಮಿತಾಬ್ ಬಚ್ಚನ್ ಧ್ವನಿಯಲ್ಲಿನ ಕೋವಿಡ್-19​ ಕಾಲರ್ ಟ್ಯೂನ್ ತೆರೆವಿಗೆ ಪಿಐಎಲ್ ಸಲ್ಲಿಕೆ

ಪ್ರತಿಯೊಬ್ಬರೂ ಗಿಡ-ಮರಗಳನ್ನು ಉಳಿಸಿ-ಬೆಳೆಸುವ ಸವಾಲು ಸ್ವೀಕರಿಸುವಂತೆ 'ಗ್ರೀನ್​ ಇಂಡಿಯಾ ಚಾಲೆಂಜ್' ಅಭಿಯಾನ್ನು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ಸಂಸದ ಜೋಗಿನಪಲ್ಲಿ ಸಂತೋಷ್ ಕುಮಾರ್ ಆರಂಭಿಸಿದ್ದರು. ದೇಶದೆಲ್ಲೆಡೆ ಇದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಅನೇಕ ನಟ - ನಟಿಯರು ಈ ಸವಾಲನ್ನು ಸ್ವೀಕರಿಸಿ, ಸಸಿಗಳನ್ನು ನೆಟ್ಟಿದ್ದಾರೆ.

ಅಜಯ್ ದೇವಗನ್ ಸದ್ಯಕ್ಕೆ ಹೈದರಾಬಾದ್​ನಲ್ಲಿ 'ಮೇ ಡೇ' ಹಾಗೂ 'ಆರ್​ಆರ್​ಆರ್​' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.