ಬೆಂಗಳೂರು: ದರ್ಶನ್ ಅಭಿಮಾನಿಗಳ ಬಗ್ಗೆ ಅವಹೇಳನ ಹಿನ್ನೆಲೆ, ನಿನ್ನೆ ಮೈಸೂರಿನಲ್ಲಿ ಜಗ್ಗೇಶ್ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕುವ ಮೂಲಕ ಅಪಮಾನ ಮಾಡಲಾಯಿತು. ಈ ಬಗ್ಗೆ ಜಗ್ಗೇಶ್ ತಮಗೆ ಅಪಮಾನ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಓದಿ: ನೆಚ್ಚಿನ ನಟನಿಗೆ ಮುತ್ತಿಗೆ ಹಾಕಿದ್ದಕ್ಕೆ ಅಸಮಾಧಾನ; ಫಿಲ್ಮ್ ಚೇಂಬರ್ ಬಳಿ ಆಗಮಿಸಿದ ನಟ ಜಗ್ಗೇಶ್ ಅಭಿಮಾನಿಗಳು
ತಮ್ಮ ಅಸಮಾಧಾನದ ಬಳಿಕ, ಜಗ್ಗೇಶ್ ಹೇಳಿಕೆ ದೊಡ್ಡ ಮಟ್ಟದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದೆ. ಆದರೆ ಜಗ್ಗೇಶ್ ಮಾತ್ರ ಏನು ಆಗಿಲ್ಲ ಎಂಬಂತೆ ನಟಿ ಅದಿತಿ ಪ್ರಭುದೇವ ಜೊತೆ ಮದುವೆ ಆಗಿದ್ದಾರೆ.
ಇದೇನಪ್ಪ ಜಗ್ಗೇಶ್ ಮತ್ತೊಂದು ಮದುವೆ ಆಗಿದ್ದಾರಾ ಎನ್ನಬೇಡಿ, ಮೈಸೂರಿನಲ್ಲಿ, ನಡೆಯುತ್ತಿರುವ ತೋತಾಪುರಿ ಸಿನಿಮಾದ ಚಿತ್ರೀಕರಣದಲ್ಲಿ ಜಗ್ಗೇಶ್, ನಟಿ ಅದಿತಿ ಪ್ರಭುದೇವ ಜೊತೆ ಮದುವೆ ಆಗುವ ಸನ್ನಿವೇಶವನ್ನ, ನಿರ್ದೇಶಕ ವಿಜಯಪ್ರಸಾದ್ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಈ ಸನ್ನಿವೇಶದಲ್ಲಿ ಹಿರಿಯ ನಟ ದತ್ತಣ್ಣ, ಸುಮನ್ ರಂಗನಾಥ್ ಸೇರಿದಂತೆ ಸಾಕಷ್ಟು ಕಲಾವಿದರು ಭಾಗವಹಿಸಿದ್ದರು.
ಅದಿತಿ ಪ್ರಭುದೇವ ಮುಸ್ಲಿಂ ಯುವತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಜಗ್ಗೇಶ್ ಹಳ್ಳಿ ರೈತನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಗೋವಿಂದಾಯಾ ನಮಃ ಹಾಗೂ ಶಿವಲಿಂಗ ಅಂತಾ ಹಿಟ್ ಸಿನಿಮಾಗಳನ್ನ ನಿರ್ಮಾಣ ಮಾಡಿದ್ದ, ನಿರ್ಮಾಪಕ ಕೆ.ಎ ಸುರೇಶ್ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.