ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಶ್ರುತಿ ಅಂಜಿಯೋಡೆಮ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕುಂದಗೋಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಬೇಕಿದ್ದ ಶ್ರುತಿ ಅವರ ಮುಖ ಊದಿಕೊಂಡಿತ್ತು. ಪರಿಣಾಮ ತಮ್ಮ ಪ್ರವಾಸ ಮೊಟಕುಗೊಳಿಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ಸದ್ಯ ಸ್ನೇಹಿತೆಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಇನ್ನು ಶೃತಿ ಅನಾರೋಗ್ಯದ ವಿಚಾರವನ್ನು ಅವರ ಮಗಳು ಗೌರಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಮ್ಮ ಅಂಜಿಯೋಡೆಮ ಇನ್ಸ್ಫೆಕ್ಷನ್ನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಶೃತಿ ಪುತ್ರಿ ಗೌರಿ ಇನ್‌ಸ್ಟಾಗ್ರಾಂನಲ್ಲಿ ಶೃತಿ ಅವರ ಅರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ Angioedema ಸೋಂಕು ಹೆಚ್ಚಾದರೆ ಪ್ರಾಣಕ್ಕೆ ಕುತ್ತು. ಹೀಗಾಗಿ ಈ ರೀತಿ ನಿಮಗೂ ಆದಲ್ಲಿ ಎಚ್ಚರಿಕೆ ವಹಿಸಿ ಎಂದು ಮನವಿ ಮಾಡಿದ್ದಾರೆ ಗೌರಿ.