ಉತ್ತರದಿಂದ ದಕ್ಷಿಣದವರೆಗೆ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಅವರ ನಾಗಾಲೋಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಚಿತ್ರರಂಗಕ್ಕೆ ಕಾಲಿಟ್ಟು 5 ವರ್ಷ ಕೂಡ ಪೂರ್ಣಗೊಂಡಿಲ್ಲ. ಅದಾಗಲೇ ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 2 ಕೋಟಿ ಜನ ಫಾಲೋವರ್ಸ್ ಹೊಂದಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ನಟಿ ಎಂಬ ಅಳಿಸಲಾರದ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದಾಳೆ.
![Actress Rashmika Mandanna Shared Another Video In Instagram](https://etvbharatimages.akamaized.net/etvbharat/prod-images/768-512-8902710-1022-8902710-1600831006691_1308newsroom_1628874500_33.jpg)
ಈ ಪ್ರಾಮಾಣದ ತೆರೆದ ಹೃದಯಗಳ ಪ್ರೀತಿಗೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಉಡುಗೊರೆಯೊಂದನ್ನು ನೀಡಿದ್ದಾರೆ. ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ಬಳಿಕ ಶರವೇಗದಲ್ಲಿಯೇ ಬೆಳೆದು ನಿಂತ ರಶ್ಮಿಕಾ, ಈಗ ದೇಶದ ಉದ್ದಗಲಕ್ಕೂ ಅಭಿಮಾನಿಗಳನ್ನು ಹೊಂದಿದ್ದಾಳೆ. ನಟಿಯ ಕೀರ್ತಿ ಇಷ್ಟಕ್ಕೆ ನಿಂತಿಲ್ಲ.
ಈಗ ಇದೇ ಖುಷಿಯಲ್ಲಿರುವ ರಶ್ಮಿಕಾ ತಮ್ಮ ಫ್ಯಾನ್ಸ್ಗಳಿಗೆ ತನ್ನ ಜೀವನದಲ್ಲಿ ನಡೆದ ಎಲ್ಲ ಮೊದಲ 20 ಸುಂದರ ಕ್ಷಣಗಳನ್ನು ಇಂದು ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ನೀವು ನನಗೆ 20 ಮಿಲಿಯನ್ ಪ್ರೀತಿ ಕೊಟ್ಟಿದ್ದೀರಿ.. ನನ್ನ ಜೀವನದಲ್ಲಿ ನಡೆದ ಎಲ್ಲ ಮೊದಲ 20 ಕ್ಷಣಗಳ ಮೂಲಕ ನಾನು ನಿಮ್ಮನ್ನು ಕರೆದುಕೊಂಡು ಹೋಗಲು ಬಯಸುತ್ತೇನೆ ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟ ಸ್ಯಾಂಡಲ್ವುಡ್ ಸುಂದರಿ ಈಗ ಟಾಲಿವುಡ್ನ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ಗೂ ಹಾರಿರುವ ಈ ನ್ಯಾಷನಲ್ ಕ್ರಶ್ ಅಲ್ಲಿಯೂ ಕಮಾಲ್ ಮಾಡುತ್ತಿದ್ದಾರೆ.