ನಾಳೆ ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬ. ಆದ್ರೆ, ಈ ಬಾರಿ ಕೆಲವು ಕಾರಣಗಳಿಂದ ಅವರು ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ.
ಕಾರ್ಯ ನಿಮಿತ್ತ ರಾಧಿಕಾ ಪಂಡಿತ್ ಬೇರೆ ಊರಿನಲ್ಲಿರುವ ಕಾರಣ ಬರ್ತ್ ಡೇ ಆಚರಿಕೊಳ್ಳುತ್ತಿಲ್ಲ. ಈ ವಿಚಾರವನ್ನು ಸೆಲ್ಫಿ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಪ್ರತಿ ವರ್ಷ ಅವರು ನೂರಾರು ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಬರ್ತಡೇ ಆಚರಿಸಿಕೊಳ್ಳುತ್ತಿದ್ರು. ಆದರೆ, ಈ ಬಾರಿ ಅಂಬರೀಶ್ ನಿಧನರಾಗಿದ್ದರಿಂದ ಯಶ್ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಹೀಗಾಗಿ ರಾಧಿಕಾ ಸಹ ಈ ವರ್ಷ ಬರ್ತಡೇ ಆಚರಣೆಯಿಂದ ದೂರ ಉಳಿದಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಕೊಂಚ ಬೇಸರ ಮೂಡಿಸಿದೆ.