ಟೀಸರ್ ಮತ್ತು ಹಾಡುಗಳಿಂದಲೇ ಸ್ಯಾಂಡಲ್ವುಡ್ ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾ 'ನಿನ್ನ ಸನಿಹಕೆ'. ಮದುವೆಯ ಮಮತೆಯ ಕರೆಯೋಲೆ ಚಿತ್ರ ಖ್ಯಾತಿಯ ಸೂರಜ್ ಗೌಡ ನಟಿಸಿ, ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ನಿನ್ನ ಸನಿಹಕೆ ಸಿನಿಮಾ, ಗಾಂಧಿನಗರದ ಅಂಗಳದಲ್ಲಿ ಹೊಸ ಭರವಸೆ ಹುಟ್ಟಿಸಿದೆ. ದೊಡ್ಮನೆ ಕುಡಿ ಧನ್ಯಾ ರಾಮ್ಕುಮಾರ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಈ ಸಿನಿಮಾದ ಮೂಲಕ ಪದಾರ್ಪಣೆ ಮಾಡಿದ್ದಾರೆ.
ಈ ಚಿತ್ರ ಅಕ್ಟೋಬರ್ 8ರಂದು ರಾಜ್ಯಾದ್ಯಂತ ತೆರೆ ಕಾಣೋದಕ್ಕೆ ರೆಡಿಯಾಗಿದೆ. ಇನ್ನು ಸಿನಿಮಾದ ವಿಶೇಷತೆ ಬಗ್ಗೆ ನಟ, ನಿರ್ದೇಶಕ ಸೂರಜ್ ಗೌಡ, ನಾಯಕಿ ಧನ್ಯಾ ರಾಮ್ಕುಮಾರ್, ಸಂಗೀತ ನಿರ್ದೇಶಕ ರಘು ದೀಕ್ಷಿತ್, ನಿರ್ಮಾಪಕರಾದ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ಮಾತನಾಡಿದ್ದಾರೆ.
ನಟ, ನಿರ್ದೇಶಕ ಸೂರಜ್ ಗೌಡ ಮಾತನಾಡಿ, ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ಒಳಗೆ, ಕ್ಯೂಟ್ ಲವ್ ಸ್ಟೋರಿ ಕಥೆಯನ್ನ ನಿನ್ನ ಸನಿಹಕೆ ಸಿನಿಮಾ ಒಳಗೊಂಡಿದೆ. ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದ ಮೇಲೆ, ಧೈರ್ಯ ಮಾಡಿ, ನಿನ್ನ ಸನಿಹಕೆ ಚಿತ್ರವನ್ನ ಬಿಡುಗಡೆ ಮಾಡುತ್ತಿದ್ದೇವೆ ಎಂದರು.
ಇದನ್ನು ಓದಿ: ದೊಡ್ಡ ಚಿತ್ರಗಳು ಒಂದೇ ದಿನ ಬಿಡುಗಡೆಯಿಂದ ನಮ್ಮ ಸಿನಿಮಾಗೆ ತೊಂದರೆ - ನಟ ಸೂರಜ್, ಧನ್ಯಾ
ಇನ್ನು ಧನ್ಯಾ ರಾಮ್ಕುಮಾರ್ ಮಾತನಾಡಿ, ನಾನು ನಟಿಸಿದ ಮೊದಲ ಸಿನಿಮಾ ನೋಡಿ ತುಂಬಾ ಎಮೋಷನಲ್ ಆದೆ. ಸಿನಿಮಾ ನೋಡಿದ ಮೇಲೆ ಮತ್ತಷ್ಟು ಚೆನ್ನಾಗಿ ಅಭಿನಯಿಸ ಬಹುದಿತ್ತು ಎಂದು ಭಾವಿಸಿದೆ ಎಂದರು.
ರಘು ದೀಕ್ಷಿತ್ ಸಂಗೀತ ಸಂಯೋಜನೆ ಇರುವ ಈ ಚಿತ್ರದ ಹಾಡುಗಳು ಈಗಾಗಲೇ ಕನ್ನಡ ಸಿನಿಪ್ರಿಯರ ಮನ ಸೆಳೆದಿದೆ. ರಘು ದೀಕ್ಷಿತ್ ಹೇಳುವ ಹಾಗೇ ಈ ಚಿತ್ರದಲ್ಲಿ ಬೀಟ್ಸ್ ಹಾಡುಗಳು ಸೇರಿ ಎಂಟು ಹಾಡುಗಳಿವೆ.
ವೈಟ್ ಆ್ಯಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ನಡಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ಚಿತ್ರ ನಿರ್ಮಿಸಿದ್ದಾರೆ. ಇದೇ ಅಕ್ಟೋಬರ್ 8ರಂದು ಕೆಆರ್ಜಿ ಸ್ಟುಡಿಯೋದಿಂದ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಿನ್ನ ಸನಿಹಕೆ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ.