ನಟ ರಮೇಶ್, ಪುಷ್ಪಕ ವಿಮಾನ ಚಿತ್ರದ ನಂತರ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದರು. ಈಗ ಮತ್ತೆ ಡಿಟೆಕ್ವಿವ್ ಅಧಿಕಾರಿಯಾಗಿ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ನಿರ್ದೇಶಕ ಆಕಾಶ್ ಶ್ರೀವಾಸ್ತವ್ ನಿರ್ದೇಶನದ 'ಶಿವಾಜಿ ಸುರತ್ಕಲ್' ಚಿತ್ರದಲ್ಲಿ ಡಿಟೆಕ್ಟಿವ್ ಪಾತ್ರ ನಿಭಾಯಿಸುತ್ತಿದ್ದಾರೆ. ಈಗಾಗಲೇ 30% ರಷ್ಟು ಶೂಟಿಂಗ್ ಮುಗಿದಿದೆ.
ಈ ಚಿತ್ರದಲ್ಲಿ ರಮೇಶ್ ಇದುವರೆಗೂ ಕಾಣಿಸಿಕೊಳ್ಳದಂತಹ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತ್ಯಾಗರಾಜನಾಗಿ ಹೆಣ್ಣುಮಕ್ಕಳ ಹಾಟ್ ಫೇವರೆಟ್ ನಟನಾಗಿರೋ ರಮೇಶ್ ಮೊದಲ ಬಾರಿಗೆ ಡಿಫ್ರೆಂಟ್ ಜಾನರ್ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಇನ್ನು ಈ ಚಿತ್ರದಲ್ಲಿ ರಾಧಿಕಾ ಚೇತನ್ ಮತ್ತು ಆರೋಹಿ ನಾರಾಯಣ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಎರಡನೇ ಹಂತದ ಚಿತ್ರೀಕರಣ ಮುಂದಿನ ವಾರ ಶುರುವಾಗಲಿದೆ.