ಮೈಸೂರು: ರಾಜ್ಯದಲ್ಲಿ ಫಿಲ್ಮ್ ಸಿಟಿ ಎಲ್ಲಿ ಬೇಕಾದರೂ ಆಗಲಿ ಅದು ಸಂತೋಷದ ವಿಚಾರ, ಅಲ್ಲದೇ ರಾಜ್ಯದ ಕನ್ನಡಿಗರಿಗೆ ಅದರಿಂದ ಅನುಕೂಲವಾಗಲಿದೆ ಎಂದು ನಟ ಅನಿರುದ್ದ್ ಸಂತಸ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ಫಿಲ್ಮ್ ಸಿಟಿ ಮೈಸೂರಿನಲ್ಲಿ ಆಗಬೇಕು ಎಂಬ ಕೂಗು ಇತ್ತು. ಅದಕ್ಕಾಗಿ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಸ್ಥಳ ನಿಗದಿ ಮಾಡಲಾಗಿತ್ತು. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ, ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅದನ್ನು ರಾಮನಗರಕ್ಕೆ ಸ್ಥಳಾಂತರ ಮಾಡಲು ಮುಂದಾದರು. ಇದಾದ ಬಳಿಕ ಸಿಎಂ ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಮಾಡಲು ಯೋಚಿಸುತ್ತಿದ್ದಾರೆ. ಫಿಲ್ಮ್ ಸಿಟಿ ಮೂರು ಜಿಲ್ಲೆಗಳಲ್ಲಿ ಗಿರಾಕಿ ಹೊಡೆಯುತ್ತಿದೆ.
ಈ ಬಗ್ಗೆ ಮಾತನಾಡಿದ ದಿ. ನಟ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ಧ್ , ರಾಜ್ಯದಲ್ಲಿ ಫಿಲ್ಮ್ ಸಿಟಿ ಎಲ್ಲಿ ಆದರೂ ಕನ್ನಡಿಗರಿಗೆ ಅನುಕೂಲವಾಗಲಿದೆ. ಈಗಾಗಲೇ ವಿಷ್ಣು ಸ್ಮಾರಕ ಸಂಬಂಧ ಶಿಲ್ಪಿಗಳೊಂದಿಗೆ ಮಾತುಕತೆ ಆಗಿದ್ದು, ಸಂಕ್ರಾಂತಿಗೆ ಅದಕ್ಕೆ ಚಾಲನೆ ನೀಡಲಿದ್ದೇವೆ. ಇನ್ನೂ ಸಾಂಸ್ಕೃತಿಕ ನಗರಿಯಲ್ಲಿ ಚಿತ್ರನಗರಿ ಆದರೆ ಉತ್ತಮ ಏಕೆಂದರೆ ನಗರಕ್ಕೆ ತನ್ನದೇ ಆದ ಹಿನ್ನೆಲೆ ಇದೆ ಎಂದರು.