ಈ ಶಾಲೆಯನ್ನೇ ಆಯ್ಕೆ ಮಾಡಿಕೊಂಡಿರುವುದಕ್ಕೆ ಕಾರಣ ತಿಳಿಸಿದ ಅಕುಲ್, ದಾರಿಯಲ್ಲಿ ಓಡಾಡುವಾಗ ಈ ಶಾಲೆ ನೋಡಿದ್ದೆ. 66 ವಿದ್ಯಾರ್ಥಿಗಳಿರುವ ಈ ಶಾಲೆಗೆ ಕೇವಲ ಇಬ್ಬರು ಶಿಕ್ಷಕರಿದ್ದಾರೆ. ಅದರಲ್ಲೂ ಓರ್ವ ಟೀಚರ್ ವೈಯಕ್ತಿಕ ಕಾರಣಗಳಿಂದ ಶಾಲೆಗೆ ಬರುತ್ತಿಲ್ಲ. ಜೊತೆಗೆ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಹತ್ತಿರದ ಮಕ್ಕಳು ಇಲ್ಲಿಗೆ ಬರುತ್ತಿಲ್ಲ. ಹೀಗಾಗಿ ಈ ಶಾಲೆ ದತ್ತು ಪಡೆದು ಮೂಲಸೌಕರ್ಯ ಒದಗಿಸಿ ಅಭಿವೃದ್ಧಿಗೆ ಶ್ರಮಿಸಲು ನಿರ್ಧರಿಸಿದೆ ಎಂದು ಮನದ ಇಂಗಿತ ವ್ಯಕ್ತಪಡಿಸಿದರು.
ಇನ್ನು ಈ ಶಾಲೆಗೆ ಶಿಕ್ಷಕರನ್ನು ನೇಮಿಸಿ ಸ್ವಂತ ಹಣದಲ್ಲೇ ಸಂಬಳ ನೀಡುವುದು. ಶೌಚಾಲಯ ನಿರ್ಮಿಸುವುದು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಪಡಿಸುವ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗೆ ಮತ್ತೆ ಕರೆತರಲು ಅಕುಲ್ ಮುಂದಾಗಿದ್ದಾರೆ.ಮಾರ್ಚ್ ಅಂತ್ಯಕ್ಕೆ ಶಾಲೆ ದತ್ತು ಪಡೆಯಲಿರುವ ಇವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಮೂಲಕ ಶಾಲಾಭಿವೃದ್ಧಿಗೆ ಚಾಲನೆ ನೀಡಲಿದ್ದಾರೆ.