ETV Bharat / sitara

ಡಿ.ಸಿ.ಪಿ ನಿಶಾ ಜೇಮ್ಸ್​ರಿಂದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ "ಆಕ್ಟ್-1978" ಸಿನಿಮಾದ ವಿಶೇಷ ಪ್ರದರ್ಶನ

author img

By

Published : Nov 28, 2020, 5:13 AM IST

"ಆಕ್ಟ್-1978" ಸಿನಿಮಾ ಬಿಡುಗಡೆಯಾದ ಬಹುತೇಕ ಚಿತ್ರಮಂದಿರಗಳ ಬಾಕ್ಸ್ ಆಫೀಸ್​ಗಳಿಕೆ ಉತ್ತಮವಾಗಿದ್ದು. ಕೊರೊನಾ ಭಯದ ನಡುವೆಯೂ ಯುವಕರಿಂದ ವಯೋವೃದ್ಧರ ತನಕ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿದ್ದು, ಎಲ್ಲರಿಂದಲೂ ಶಹಬ್ಬಾಸ್ಗಿರಿ ಸಿಗುತ್ತಿದೆ.

ಆಕ್ಟ್-1978" ಸಿನಿಮಾದ ವಿಶೇಷ ಪ್ರದರ್ಶನ
ಆಕ್ಟ್-1978" ಸಿನಿಮಾದ ವಿಶೇಷ ಪ್ರದರ್ಶನ

ಬೆಂಗಳೂರು : "ಆಕ್ಟ್-1978" ಕನ್ನಡ ಸಿನಿಮಾ ವೀಕ್ಷಿಸಿ ಬಹಳ ಇಷ್ಟಪಟ್ಟಿದ್ದ ಡಿ.ಸಿ.ಪಿ ನಿಶಾ ಜೇಮ್ಸ್, ಸಿನಿಮಾದಲ್ಲಿರುವ ಸಂದೇಶ ಎಲ್ಲರಿಗೂ ತಲುಪಬೇಕು ಎಂಬ ಆಶಯದಿಂದ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ. ಅವರು ಸ್ವಯಂಪ್ರೇರಿತರಾಗಿ ಬೆಂಗಳೂರು ಕಮಿಷನರ್ ಕಛೇರಿಯ ಎಲ್ಲ ಸಿಬ್ಬಂದಿಗೆ ವಿಶೇಷ ಪ್ರದರ್ಶನ ಏರ್ಪಡಿಸಿ ಸಿನಿಮಾ ತೋರಿಸಿದ್ದಾರೆ.

ಸಿನಿಮಾ ನೋಡಿದ ನಂತರ ಕಛೇರಿಯ ಸಿಬ್ಬಂದಿ ಭಾವುಕರಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಇಂತಹ ಒಳ್ಳೆಯ ಸಿನಿಮಾಗಳು ಕನ್ನಡದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಆಶಿಸಿದ್ದಾರೆ. ಹೊಸದಾಗಿ ಸರ್ಕಾರಿ ಕೆಲಸಕ್ಕೆ ಸೇರಿದ ಸಿಬ್ಬಂದಿಯೊಬ್ಬರು ಈ ಸಿನೆಮಾ ನೋಡಿದ ನಂತರ ತಾವು ಪ್ರಾಮಾಣಿಕವಾಗಿ ಸರ್ಕಾರಿ ಕೆಲಸ ಮಾಡುವುದಕ್ಕೆ ಈ ಸಿನಿಮಾ ನನಗೆ ಸ್ಪೂರ್ತಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಆಕ್ಟ್-1978" ಸಿನಿಮಾ ಬಿಡುಗಡೆಯಾದ ಬಹುತೇಕ ಚಿತ್ರಮಂದಿರಗಳ ಬಾಕ್ಸ್ ಆಫೀಸ್​ಗಳಿಕೆ ಉತ್ತಮವಾಗಿದ್ದು. ಕೊರೊನಾ ಭಯದ ನಡುವೆಯೂ ಯುವಕರಿಂದ ವಯೋವೃದ್ಧರ ತನಕ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿದ್ದು, ಎಲ್ಲರಿಂದಲೂ ಶಹಬ್ಬಾಸ್ಗಿರಿ ಸಿಗುತ್ತಿದೆ.

ಪೊಲೀಸ್ ಆಯುಕ್ತರ ಕಚೇರಿಯಲ್ಲಿ "ಆಕ್ಟ್-1978" ಸಿನಿಮಾದ ವಿಶೇಷ ಪ್ರದರ್ಶನ

ಗಾಂಧಿನಗರದ ಪ್ರಕಾರ "ಆಕ್ಟ್-1978 ಚಿತ್ರ ಹಿಟ್"ಎಂದು ಘೋಷಿಸಲಾಗಿದ್ದು,‌ ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಹೆಚ್ಚಿನ ಜನರಿಗೆ ತಲುಪಲಿದ್ದು, ಇತರೆ ರಾಜ್ಯಗಳಲ್ಲಿಯೂ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಈ ಎಲ್ಲ ಬೆಳವಣಿಗೆಯ ಆಧಾರದ ಮೇಲೆ ಹೇಳುವುದಾದರೆ "ಚಿತ್ರಮಂದಿರಗಳಲ್ಲೇ ಸಿನಿಮಾ ಬಿಡುಗಡೆ ಮಾಡಬೇಕು" ಎಂಬ ತಂಡದ ನಿರ್ಧಾರಕ್ಕೆ ಯಶಸ್ಸು ಸಿಕ್ಕಿದೆ. ಚಿತ್ರಮಂದಿರಗಳಿಗೆ ಜೀವ ಬರಬೇಕು, ಮರಳಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರಬೇಕು, ಬೆಳ್ಳಿಪರದೆಯ ಸಿನೆಮಾ ಅನುಭವ ಪಡೆಯಬೇಕು, ಚಿತ್ರಮಂದಿರಗಳನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿರುವವರಿಗೆ ಉತ್ಸಾಹ ತುಂಬಬೇಕು. ಆ ಮೂಲಕ ಸಿನಿಮಾದ ನಿಜ ಸಂಭ್ರಮದ ವಾತಾವಾರಣ ನಿರ್ಮಾಣವಾಗಬೇಕು ಎಂಬ ಆಕ್ಟ್-1978 ಚಿತ್ರದ ನಿರ್ದೇಶಕ ಮಂಸೋರೆ ಹಾಗೂ ನಿರ್ಮಾಪಕ ದೇವರಾಜ್ ಅವರ ಆಶಯಕ್ಕೆ ಜಯ ಸಿಕ್ಕಿದೆ.

ಚಿತ್ರತಂಡ
ಚಿತ್ರತಂಡ

ಆಕ್ಟ್-1978 ಚಿತ್ರಕ್ಕೆ ಸಿಕ್ಕ ಜನಬೆಂಬಲ ಕಂಡು ಸ್ಯಾಂಡಲ್‌ವುಡ್ ಗರಿಗೆದರಿದೆ, ಇಂದು ಮೂರು ಹೊಸ ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿದ್ದು, ಮುಂದಿನ ವಾರದ ಹೊತ್ತಿಗೆ ಸುಮಾರು ಹದಿನೈದು ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಡಿದೆ. ಒಟ್ಟು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿದ ಆಕ್ಟ್-1978 ಸಿನಿಮಾದ ಗೆಲುವು ಬರೀ ತಂಡದ ಗೆಲುವಲ್ಲ, ಪ್ರೇಕ್ಷಕರು, ನೆಟ್ಟಿಗರು, ಮಾಧ್ಯಮದವರು ಮತ್ತು ಚಿತ್ರಮಂದಿರದ ಸಿಬ್ಬಂದಿ ಹಾಗೂ ಮಾಲೀಕರ ಗೆಲುವು ಎಂದು ಸಿನಿಮಾ ತಂಡ ಭಾವಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.