ETV Bharat / sitara

'ಲವ್ ಮಾಕ್ಟೈಲ್​' ಸಿನಿಮಾ ನೋಡಿ ಬೇಸರ ವ್ಯಕ್ತಪಡಿಸಿದ ಅಭಿಮಾನಿ...ಕಾರಣ ಏನು...? - A Fan sent 200 rs to Krishna after watch Love mocktile movie

ಯಾವುದೇ ವಾಟ್ಸ್​​ ಆ್ಯಪ್​​ ಡಿಪಿ ಹಾಗೂ ಸೋಷಿಯಲ್ ಮೀಡಿಯಾ ನೋಡಿದರೂ 'ಲವ್ ಮಾಕ್ಟೈಲ್​' ಸಿನಿಮಾದ್ದೇ ಹವಾ. ಸಿನಿಮಾ ಚೆನ್ನಾಗಿದ್ದರೆ ಪ್ರೇಕ್ಷಕರು ಬೆನ್ನು ತಟ್ಟುತ್ತಾರೆ ಎಂಬುದಕ್ಕೆ ಸಿನಿಮಾ ನೋಡಿದ ಅಭಿಮಾನಿಯೊಬ್ಬರು ನಿರ್ದೇಶಕ ಕೃಷ್ಣ ಅವರ ಅಕೌಂಟಿಗೆ 200 ರೂಪಾಯಿ ಕಳಿಸಿರುವುದು ಸಾಕ್ಷಿ.

Love mocktile
'ಲವ್ ಮಾಕ್ಟೈಲ್​'
author img

By

Published : Mar 18, 2020, 3:27 PM IST

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ವಿಭಿನ್ನ ಪ್ರಯೋಗಾತ್ಮಕ ಸಿನಿಮಾಗಳು ಬರುತ್ತಿವೆ. ಈ ಸಾಲಿನಲ್ಲಿ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ 'ಲವ್ ಮಾಕ್ಟೈಲ್​' ಸಿನಿಮಾ ಕೂಡಾ ಒಂದು. ಚಿತ್ರಮಂದಿರದಲ್ಲಿದ್ದಾಗ ಮಾಡಿದ ಸದ್ದಿಗಿಂತಲೂ, ಓಟಿಟಿ ಅಂದರೆ ಡಿಜಿಟಲ್ ಪ್ಲಾಟ್​​​​​​​​ಫಾರ್ಮ್​ನಲ್ಲಿ ಬಹಳ ಸದ್ದು ಮಾಡುತ್ತಿದೆ.

Love mocktile
'ಲವ್ ಮಾಕ್ಟೈಲ್​'

ಯಾವುದೇ ವಾಟ್ಸ್​​ ಆ್ಯಪ್​​ ಡಿಪಿ ಹಾಗೂ ಸೋಷಿಯಲ್ ಮೀಡಿಯಾ ನೋಡಿದರೂ 'ಲವ್ ಮಾಕ್ಟೈಲ್​' ಸಿನಿಮಾದ್ದೇ ಹವಾ. ಸಿನಿಮಾ ಚೆನ್ನಾಗಿದ್ದರೆ ಪ್ರೇಕ್ಷಕರು ಬೆನ್ನು ತಟ್ಟುತ್ತಾರೆ ಎಂಬುದಕ್ಕೆ ಸಿನಿಮಾ ನೋಡಿದ ಅಭಿಮಾನಿಯೊಬ್ಬರು ನಿರ್ದೇಶಕ ಕೃಷ್ಣ ಅವರ ಅಕೌಂಟಿಗೆ 200 ರೂಪಾಯಿ ಕಳಿಸಿರುವುದು ಸಾಕ್ಷಿ.ಈ ಬಗ್ಗೆ ನಿರ್ದೇಶಕ ಕಮ್ ಡಾರ್ಲಿಂಗ್ ಕೃಷ್ಣ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಲವ್ ಮಾಕ್ಟೈಲ್​' ಬಿಡುಗಡೆ ಆದ ವೇಳೆ, ಜನರು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಫೇಸ್‌ಬುಕ್‌ನಲ್ಲಿ ಇದು ಒಳ್ಳೆಯ ಸಿನಿಮ ಎಂದು ಸ್ಟೇಟಸ್ ಹಾಕುತ್ತಿದ್ದರು. ಈಗ ಓಟಿಟಿಯಲ್ಲಿ ಈ ಸಿನಿಮಾ ವೈರಲ್ ಆದ ನಂತರ ಸ್ಟೇಟಸ್ ಹಾಕುವವರ ಸಂಖ್ಯೆ ಇನ್ನೂ ಹೆಚ್ಚಾಗಿದೆ.

Love mocktile
'ಲವ್ ಮಾಕ್ಟೈಲ್​'

'ಮೊನ್ನೆ ಸಿನಿಮಾ ನೋಡಿದ ಅಭಿಮಾನಿಯೊಬ್ಬರು ನನಗೆ ಅಭಿನಂದನೆ ಸಲ್ಲಿಸಿ ಮೇಲ್‌ ಮಾಡಿದ್ದರು. ಅದರಲ್ಲಿ ಥಿಯೇಟರ್‌ನಲ್ಲಿ ಸಿನಿಮಾವನ್ನು ನೋಡದೇ ಇದ್ದದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅವರು ನನ್ನ ಅಕೌಂಟ್‌ ನಂಬರ್‌ ಕಳಿಸುವಂತೆ ಮನವಿ ಮಾಡಿದ್ದರು. ನಾನು ಸುಮ್ಮನೆ ನೋಡೋಣ ಎಂದು ಅಕೌಂಟ್‌ ನಂಬರ್‌ ಕಳಿಸಿದರೆ, ಆ ಕಡೆಯಿಂದ ಅಭಿಮಾನಿ 200 ರೂಪಾಯಿ ಟ್ರಾನ್ಸ್‌ಫರ್‌ ಮಾಡೇಬಿಟ್ಟಿದ್ದಾರೆ‌‌. ಇಂತಹ ಅಭಿಮಾನಕ್ಕೆ ನಾವು ಬೆಲೆ ಕಟ್ಟೋದಿಕ್ಕೆ ಆಗೋಲ್ಲ. ಈ ಹಿಂದೆ ರಿಷಭ್‌ ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಸಿನಿಮಾವನ್ನು ಟಿವಿಯಲ್ಲಿ ನೋಡಿದ ಅಭಿಮಾನಿಯೊಬ್ಬರು ಅವರಿಗೆ 200 ರೂಪಾಯಿ ಪೋಸ್ಟ್‌ ಮಾಡಿದ್ದ ಘಟನೆಯನ್ನು ಸ್ಮರಿಸಬಹುದು. ಸದ್ಯ ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆಗೋದಿಕ್ಕೆ ಕಷ್ಟ ಆಗುತ್ತಿದ್ದ ನಮ್ಮ ಸಿನಿಮಾ ಡಿಜಿಟಲ್ ಪ್ಲಾಟ್​​​​​ಫಾರ್ಮ್​ನಲ್ಲಿ ಮೆಚ್ಚುಗೆ ಗಳಿಸುತ್ತಿರುವುದಕ್ಕೆ ಕೃಷ್ಣ ಖುಷಿಯಾಗಿದ್ದಾರೆ. ಸಿನಿಮಾ ಮಾಡಿದ್ದಕ್ಕೂ ಸಾರ್ಥಕ ಆಯ್ತು ಎನ್ನುತ್ತಿದ್ದಾರೆ ಕೃಷ್ಣ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.