ಮಹೇಂದ್ರ ಸಿಂಗ್ ಧೋನಿ ಜೀವನ ಆಧಾರಿತ ಬಯೋಪಿಕ್ ನಂತರ ಇದೀಗ 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಘಟನೆಯನ್ನಾಧರಿಸಿ 83 ಎಂಬ ಟೈಟಲ್ನಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಡಿಸೆಂಬರ್ 24ರಂದು ದೇಶಾದ್ಯಂತ ರಿಲೀಸ್ ಆಗಲಿದೆ. ಈ ಸಿನಿಮಾದ ಪ್ರಚಾರವನ್ನ ಚಿತ್ರತಂಡ ಈಗಾಗಲೇ ದುಬೈ, ಚನ್ನೈ, ಮುಂಬೈನಲ್ಲಿ ಮಾಡಿದ್ದು, ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಚಾರ ನಡೆಸಿದರು.
83 ಸಿನಿಮಾ ಕನ್ನಡದಲ್ಲೂ ಮೂಡಿ ಬರುತ್ತಿರುವ ಕಾರಣ ಕರ್ನಾಟಕದಲ್ಲಿ ಕಿಚ್ಚ ಸುದೀಪ್ ಚಿತ್ರವನ್ನ ಅರ್ಪಿಸುತ್ತಾರೆ. ಪ್ರಚಾರ ಸಮಾರಂಭದ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಲಾಯಿತು.ಈ ಸಿನಿಮಾದ ವಿಶೇಷತೆ ಬಗ್ಗೆ ಮಾತನಾಡುವ ಸಂಧರ್ಭದಲ್ಲಿ ಟೀಂ ಇಂಡಿಯಾದ ಮಾಜಿ ಸ್ಟಾರ್ ಕ್ರಿಕೆಟರ್ ಹಾಗೂ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ಬಯೋಪಿಕ್ ಮಾಡುವ ವಿಚಾರವೂ ಚರ್ಚೆಗೆ ಬಂದಿದೆ.
ಇದನ್ನೂ ಓದಿರಿ: 83 Movie: ರಣವೀರ್ ಸಿಂಗ್, ಕ್ರಿಕೆಟರ್ ಶ್ರೀಕಾಂತ್ಗೆ ಕನ್ನಡದ ಡೈಲಾಗ್ ಹೇಳಿಕೊಟ್ಟ ಕಿಚ್ಚ!
ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಪಾತ್ರವನ್ನು ಮಾಡುವ ಬಗ್ಗೆ ಪ್ರಶ್ನೆಯೊಂದು ಕಿಚ್ಚ ಸುದೀಪ್ ಅವರಿಗೆ ಕೇಳಿ ಬಂತು. ಈ ವೇಳೆ ಮಾತನಾಡಿದ ಅವರು, ನಾನು ದ್ರಾವಿಡ್ ಬಯೋಫಿಕ್ ಮಾಡೋದಿಕ್ಕೆ ಇಷ್ಟ, ಪಕ್ಕದಲ್ಲಿ ಬಾಲಿವುಡ್ ಡೈರೆಕ್ಟರ್ ಕಬೀರ್ ಖಾನ್ ಇದ್ದಾರೆ ಅವ್ರನ್ನ ಕೇಳಿ ಅಂದರು. ಆಗ 83 ಸಿನಿಮಾ ನಿರ್ದೇಶಕ ಕಬೀರ್ ಖಾನ್ ಒಪ್ಪಿಗೆ ನೀಡಿದ್ದು, ರಾಹುಲ್ ದ್ರಾವಿಡ್ ಬಯೋಪಿಕ್ ರೈಟ್ಸ್ ತಂದ್ರೆ ಖಂಡಿತ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ವಿಚಾರ ಕೇಳಿ ರಣವೀರ್ ಸಿಂಗ್ ಕೂಡ ಖುಷಿಪಟ್ಟಿದ್ದಾರೆ.ಎಲ್ಲವೂ ಅಂದುಕೊಂಡಂತೆ ನಡೆದರೆ ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ನಿರ್ದೇಶನದಲ್ಲಿ ರಾಹುಲ್ ದ್ರಾವಿಡ್ ಪಾತ್ರದಲ್ಲಿ ಕಿಚ್ಚ ಸುದೀಪ್ ಅವರನ್ನ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಗಲಿದೆ.