ಮುಂಬೈ: ಮುಂಬೈಗೆ ಮತ್ತೆ ಹಿಂತಿರುಗಬಾರದೆಂದು ಶಿವಸೇನೆಯ ಸಂಸದ ಸಂಜಯ್ ರಾವತ್ ಹೇಳಿರುವುದಕ್ಕೆ ಬಾಲಿವುಡ್ ನಟಿ ಕಂಗನಾ ಕೆಂಡಾಮಂಡಲವಾಗಿದ್ದಾಳೆ.
"ಶಿವಸೇನೆಯ ನಾಯಕ ಸಂಜಯ್ ರಾವತ್ ನನಗೆ ಮುಂಬೈಗೆ ಹಿಂತಿರುಗಬಾರದೆಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಮುಂಬೈ ಯಾಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ?" ಎಂದು ಕಂಗನಾ ತನ್ನ ಟ್ವೀಟ್ ಮಾಡಿದ್ದಾರೆ.
"ಮೂವಿ ಮಾಫಿಯಾ"ಗಿಂತ ನಗರ ಪೊಲೀಸ್ ಪಡೆಗೆ ಭಯಪಡುತ್ತೇನೆ ಎಂದು ಹೇಳಿಕೆ ನೀಡಿದ ನಂತರ ಕಂಗನಾಳನ್ನು ಸಂಜಯ್ ರಾವತ್ ಅವರು ನಟಿ ವಿರುದ್ಧ ಮಾತನಾಡಿದ್ದರು.
ಮುಂಬೈಗೆ ಬರದಂತೆ ನಟಿಗೆ ರಾವತ್ ಹೇಳಿದ್ದರು ಎಂಬ ವರದಿಯ ಲಿಂಕ್ ಅನ್ನು ಕೂಡಾ ನಟಿ ಹಂಚಿಕೊಂಡಿದ್ದಾರೆ.