ETV Bharat / sitara

'ಸೈನಾ' ಚಿತ್ರದಿಂದ ಶ್ರದ್ಧಾ ಕೈಬಿಡಲು ಕಾರಣವೇನು​​...ಮಾಧ್ಯಮದವರ ಪ್ರಶ್ನೆಗೆ ನಿರ್ದೇಶಕ ಪ್ರತಿಕ್ರಿಯಿಸಿದ್ದು ಹೀಗೆ..!

author img

By

Published : Mar 9, 2021, 2:28 PM IST

ಬಹುನಿರೀಕ್ಷಿತ ಬಾಲಿವುಡ್ ಸಿನಿಮಾ 'ಸೈನಾ' ಚಿತ್ರದಿಂದ ಶ್ರದ್ಧಾ ಕಪೂರ್ ಅವರನ್ನು ಕೈ ಬಿಡಲು ಕಾರಣವೇನು ಎಂಬ ಪ್ರಶ್ನೆಗೆ ನಿರ್ದೇಶಕ ಅಮೋಲ್ ಗುಪ್ತಾ ಉತ್ತರ ನೀಡಲು ನಿರಾಕರಿಸಿದರು. ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಸಿನಿಮಾ ಮಾರ್ಚ್ 26 ರಂದು ತೆರೆಗೆ ಬರಲಿದೆ.

Saina
'ಸೈನಾ'

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಬಯೋಪಿಕ್ 'ಸೈನಾ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಈ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು ಟ್ರೇಲರ್​​​ಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಪರಿಣಿತಿ ಛೋಪ್ರಾ ಸೈನಾ ನೆಹ್ವಾಲ್ ಪಾತ್ರದಲ್ಲಿ ನಟಿಸಿದ್ದಾರೆ.

  • " class="align-text-top noRightClick twitterSection" data="">

2017 ರಲ್ಲಿ ಈ ಪ್ರಾಜೆಕ್ಟ್ ಬಗ್ಗೆ ಮೊದಲ ಬಾರಿಗೆ ಘೋಷಿಸಲಾಯ್ತು. ಸೈನಾ ನೆಹ್ವಾಲ್ ಪಾತ್ರವನ್ನು ಶ್ರದ್ಧಾ ಕಪೂರ್ ಮಾಡುತ್ತಾರೆ ಎನ್ನಲಾಗಿತ್ತು. ಈ ಪಾತ್ರಕ್ಕಾಗಿ ಶ್ರದ್ಧಾ ಕೂಡಾ ಕೆಲವು ದಿನಗಳ ಕಾಲ ತರಬೇತಿ ಪಡೆದಿದ್ದರು. ಆದರೆ 2019 ರಲ್ಲಿ ಈ ಶ್ರದ್ಧಾ ಪಾತ್ರಕ್ಕೆ ಪರಿಣಿತಿ ಛೋಪ್ರಾರನ್ನು ಕರೆತರಲಾಯ್ತು. ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಅಮೋಲ್ ಗುಪ್ತಾ ಅವರನ್ನು ಈ ವಿಚಾರದ ಬಗ್ಗೆ ಪ್ರಶ್ನಿಸಿದಾಗ ಅಮೋಲ್, ಉತ್ತರಿಸಲು ನಿರಾಕರಿಸಿದರು. ನಾನು ಈಗಷ್ಟೇ ಕೋವಿಡ್​​-19 ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದೇನೆ, ಹೆಚ್ಚಿಗೆ ಮಾತನಾಡಲು ಆಗುವುದಿಲ್ಲ ಎಂದು ಜಾರಿಗೊಂಡರು.

ಇದನ್ನೂ ಓದಿ: ಹೊಸ ಧಾರಾವಾಹಿ ಮೂಲಕ ಮತ್ತೆ ಬರಲಿದ್ದಾರಾ ಟಿ.ಎನ್. ಸೀತಾರಾಮ್​​...?

ಹರಿಯಾಣದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ ವಿಶ್ವದ ನಂಬರ್ ಒನ್ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಗುರುತಿಸಿಕೊಂಡ ಸೈನಾ ನೆಹ್ವಾಲ್ ಬಾಲ್ಯ, ವಿದ್ಯಾಭ್ಯಾಸ, ಬ್ಯಾಡ್ಮಿಂಟನ್ ಹಾಗೂ ಇನ್ನಿತರ ವಿಚಾರಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಮಾರ್ಚ್ 26 ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಪರಿಣಿತಿ ಛೋಪ್ರಾ ಜೊತೆ ಮೇಘನಾ ಮಲಿಕ್, ಮನವ್ ಕೌಲ್ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.