ಹೈದರಾಬಾದ್: ಅರ್ಜುನ್ ರೆಡ್ಡಿ ಖ್ಯಾತಿಯ ತೆಲುಗು ನಟ ವಿಜಯ್ ದೇವರಕೊಂಡ ಇದೀಗ ಪ್ಯಾನ್ - ಇಂಡಿಯಾ ಸಿನಿಮಾದೊಂದಿಗೆ ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿದ್ದಾರೆ. ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶನ ಹಾಗೂ ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೂಡಿ ಬರುತ್ತಿರುವ ಸಿನಿಮಾಗೆ 'ಲೈಗರ್' ಎಂದು ಹೆಸರಿಡಲಾಗಿದೆ. ಬಾಲಿವುಡ್ ನಟಿ ಅನನ್ಯಾ ಪಾಂಡೆ ಜೊತೆ ದೇವರಕೊಂಡ ಡ್ಯೂಯಟ್ ಮಾಡಲಿದ್ದಾರೆ. ಚಿತ್ರದಲ್ಲಿ ದೇವರಕೊಂಡ ಸ್ಟಂಟರ್ ಪಾತ್ರವನ್ನು ನಿರ್ವಹಿಸಲಿದ್ದು, ಇದಕ್ಕಾಗಿ ಅವರು ಥಾಯ್ಲೆಂಡ್ನಲ್ಲಿ ಮಾರ್ಷಲ್ ಆರ್ಟ್ ತರಬೇತಿ ಪಡೆದಿದ್ದಾರೆ.
ಈ ಮೊದಲು 'ಫೈಟರ್' ಎಂದು ಈ ಸಿನಿಮಾಗೆ ಶೀರ್ಷಿಕೆ ನೀಡಲಾಗಿತ್ತು. ಆದರೆ, ಬಾಲಿವುಡ್ನ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಜೊತೆಯಾಗಿ ನಟಿಸುತ್ತಿರುವ ಚಿತ್ರಕ್ಕೆ ಈಗಾಗಲೇ 'ಫೈಟರ್' ಎಂಬ ಟೈಟಲ್ ಘೋಷಣೆಯಾಗಿದ್ದರಿಂದ 'ಲೈಗರ್' ಬದಲಾಯಿಸಲಾಗಿದೆ.
'ಲೈಗರ್' - ಹೆಸರು ಸೂಚಿಸುವಂತೆ ಚಿತ್ರದ ಫಸ್ಟ್ ಲುಕ್ನಲ್ಲಿ ವಿಜಯ್ ದೇವರಕೊಂಡ ಹಿಂಭಾಗದಲ್ಲಿ ಅರ್ಧ ಲಯನ್ (ಸಿಂಹ) ಹಾಗೂ ಅರ್ಧ ಟೈಗರ್ (ಹುಲಿ) ಇರುವುದನ್ನು ಕಾಣಬಹುದಾಗಿದೆ.