ETV Bharat / sitara

ವಿಕ್ಕಿ ಕೌಶಲ್​ - ನಟಿ ಕತ್ರಿನಾ ನಡುವಿನ ಸಂಬಂಧ ನಿಜವಂತೆ; ಸ್ಟಾರ್​ ನಟನ ಮಗನಿಂದ ಬಯಲಾಯ್ತು ಸತ್ಯ..!

author img

By

Published : Jun 9, 2021, 10:30 PM IST

ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ 'ಉರಿ' ಚಿತ್ರದ ನಟ ವಿಕ್ಕಿ ಕೌಶಲ್ ಜೊತೆ ಡೇಟಿಂಗ್​ ಮಾಡ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಚರ್ಚೆಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ಜೊತೆಯಾಗಿಯೇ ಪಾರ್ಟಿಗಳಲ್ಲಿ ಭಾಗಿಯಾಗೋದು, ಒಟ್ಟಾಗಿ ಹಾಲಿಡೇ ಎಂಜಾಯ್​ ಮಾಡೋದು ಸೇರಿದಂತೆ ಸಿನೆಮಾಗಳಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದರ ಫಲವಾಗಿ ಅಭಿಮಾನಿಗಳಲ್ಲಿ ಕಾತರತೆ ಇಮ್ಮಡಿಯಾಗಿತ್ತು. ಇದೀಗ ಅದಕ್ಕೆ ತೆರೆಎಳೆಯುವ ಪ್ರಯತ್ನವನ್ನು ಬಾಲಿವುಡ್​ ನಟರೊಬ್ಬರು ಮಾಡಿದ್ದಾರೆ.

vicky-kaushal-katrina-kaif
ವಿಕ್ಕಿ ಕೌಶಲ್​-ನಟಿ ಕತ್ರಿನಾ

ಹೈದರಾಬಾದ್​: ಬಾಲಿವುಡ್​ ನಟಿ ಕತ್ರಿನಾ ಕೈಫ್​ ಮತ್ತು ನಟ ವಿಕ್ಕಿ ಕೌಶಲ್​ ಪ್ರೀತಿ ಸದ್ಯದಲ್ಲಿ ಅಧಿಕೃತವಾಗಬಹುದು, ಇಬ್ಬರು ಮದುವೆ ಆಗುವ ಯೋಚನೆಯೂ ಇರಬಹುದು ಎಂಬ ಅನುಮಾನ ಅಭಿಮಾನಿಗಳನ್ನು ಬಿಟ್ಟು ಬಿಡದೆ ಕಾಡ್ತಿದೆ. ಈ ಮಧ್ಯೆ ಬಿಟೌನ್ ಸೂಪರ್ ಸ್ಟಾರ್ ನಟನ ಪುತ್ರ ಹರ್ಷವರ್ಧನ್ ಕಪೂರ್, ವಿಕ್ಕಿ ಮತ್ತು ಕತ್ರಿನಾ ನಡುವಿನ ಸಂಬಂಧವನ್ನು ಖಚಿತಪಡಿಸಿದ್ದಾರೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಒಟ್ಟಿರುವುದು ನಿಜಾ, ಬಹುಶಃ ನನ್ನ ಹೇಳಿಕೆಯಿಂದ ಅವರಿಗೆ ಮುಜುಗರ ಉಂಟಾಗಬಹುದು ಎಂದು ಬಾಲಿವುಡ್ ಅನಿಲ್ ಕಪೂರ್ ಮಗ ಹರ್ಷವರ್ಧನ್ ಕಪೂರ್ ಬಿಟೌನ್ ಲವ್‌ಬರ್ಡ್ಸ್‌ಗಳ ಸಂಬಂಧದ ಬಗ್ಗೆ ಟಿವಿ ಚಾಟ್ ಶೋನಲ್ಲಿ ಮಾತನಾಡುತ್ತಾ ಸತ್ಯ ಬಾಯ್ಬಿಟ್ಟಿದ್ದಾರೆ.

ಹೊಸ ವರ್ಷದ ಆರಂಭದಲ್ಲಿ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಒಟ್ಟಿಗೆ ರೆಸಾರ್ಟ್‌ವೊಂದರಲ್ಲಿ ಕಾಣಿಸಿಕೊಂಡಿದ್ದ ಪೋಟೋ ವೈರಲ್​ ಆಗಿತ್ತು. ಸಿಹಿ ಸುದ್ದಿಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಏಪ್ರಿಲ್‌ನಲ್ಲಿ ವಿಕ್ಕಿ ತಮ್ಮ ಕೋವಿಡ್​ ಪಾಸಿಟಿವ್​ ವರದಿಯನ್ನು ಘೋಷಿಸಿಕೊಂಡಿದ್ದು, ಹಾಗೂ ಇದರ ಬೆನ್ನಲ್ಲೇ ಕತ್ರಿನಾ ಕೂಡಾ ಪಾಸಿಟಿವ್​ ಎಂದು ಹೇಳಿಕೊಂಡಿದ್ದು ಇವರಿಬ್ಬರ ನಡುವಿನ ಸಂಬಂಧಕ್ಕೆ ದೃಢವಾದ ಸಾಕ್ಷಿ ಸಿಕ್ಕಿತ್ತು.

ಇದೀಗ ಇವರಿಬ್ಬರ ಸ್ನೇಹವನ್ನು ಹರ್ಷವರ್ಧನ್ ಕಪೂರ್ ಕೂಡಾ ನಿಜವೆಂದು ಹೇಳಿರುವುದರಿಂದ ಅಭಿಮಾನಿಗಳು ಫುಲ್​ ಖಷಿಯಾಗಿದ್ದಾರೆ.

ಓದಿ: ಬಿಗ್​ಬಾಸ್ ಮನೆಯಿಂದ ಬಂದ ಬಳಿಕ ವೈಷ್ಣವಿ ಗೌಡ ದಿನಚರಿ ಹೇಗಿದೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.