ETV Bharat / sitara

ಆರ್ಯನ್‌ ಖಾನ್‌ಗೆ ಇಂದೂ ಸಿಗದ ಜಾಮೀನು ; ನಾಳೆಗೆ ವಿಚಾರಣೆ ಮುಂದೂಡಿದ ಬಾಂಬೆ ಹೈಕೋರ್ಟ್‌

ಆರ್ಯನ್ ಪರವಾಗಿ ಹಿರಿಯ ವಕೀಲ ಮತ್ತು ಕೇಂದ್ರದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಮಂಗಳವಾರ ತಮ್ಮ ವಾದವನ್ನು ಮುಕ್ತಾಯಗೊಳಿಸಿದ್ದರು. ಆರ್ಯನ್‌ ಬಂಧನವನ್ನು ರೋಹಟಗಿ ನಿರಂಕುಶ ಎಂದು ಕರೆದ್ದರು..

The Bombay high court postpones hearing on aryan khan's bail plea for tomorrow
ಆರ್ಯನ್‌ ಖಾನ್‌ಗೆ ಇಂದೂ ಸಿಗದ ಜಾಮೀನು; ನಾಳೆಗೆ ವಿಚಾರಣೆ ಮುಂದೂಡಿದ ಬಾಂಬೆ ಹೈಕೋರ್ಟ್‌
author img

By

Published : Oct 27, 2021, 6:21 PM IST

ಮುಂಬೈ : ಕ್ರೂಸ್‌ ಹಡಗಿನಲ್ಲಿ ಡ್ರಗ್ಸ್‌ ಪಾರ್ಟಿ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ಬಾಲಿವುಡ್‌ ನಟ ಶಾರುಖ್ ಖಾನ್‌ ಪುತ್ರ ಆರ್ಯನ್‌ ಖಾನ್‌ಗೆ ಇಂದೂ ಕೂಡ ಜಾಮೀನು ಸಿಗಲಿಲ್ಲ. ಬಾಂಬೆ ಹೈಕೋರ್ಟ್‌ನಲ್ಲಿಂದು ನಡೆದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶರು ನಾಳೆಗೆ ಮುಂದೂಡಿದ್ದಾರೆ.

ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಮತ್ತು ಹಿರಿಯ ವಕೀಲ ಅಮಿತ್ ದೇಸಾಯಿ ಇಂದು ತಮ್ಮ ವಾದವನ್ನು ಮುಕ್ತಾಯಗೊಳಿಸಿದ ನಂತರ ನ್ಯಾಯಾಧೀಶರಾದ ನಿತಿನ್ ಡಬ್ಲ್ಯೂ ಸಾಂಬ್ರೆ ಅವರ ಏಕಸದಸ್ಯ ಪೀಠ ವಿಚಾರಣೆಯನ್ನು ನಾಳೆ ಮುಂದೂಡುವ ನಿರ್ಧಾರಕ್ಕೆ ಬಂದಿದೆ. ನಾಳೆ ಎನ್‌ಸಿಬಿ ಪರ ವಾದವನ್ನು ಕೋರ್ಟ್‌ ಆಲಿಸಲಿದೆ.

ಅರ್ಬಾಜ್ ಪರ ವಾದ ಮಂಡಿಸಿದ ದೇಸಾಯಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಆರೋಪಿಸಿದಂತೆ ಪಿತೂರಿಗೆ ಯಾವುದೇ ಆಧಾರಗಳಿಲ್ಲ ಎಂದು ಹೇಳಿದ್ದಾರೆ. ಆರ್ಯನ್ ಪ್ರಕರಣದಲ್ಲಿ ಮಾಡಿದ ವಾದಗಳನ್ನು ಇಂದು ಅವರು ಪುನರುಚ್ಚರಿಸಿದ್ದಾರೆ.

ವಾಟ್ಸ್‌ಆ್ಯಪ್ ಚಾಟ್‌ಗಳು ಮುಂಬೈ ಕ್ರೂಸ್‌ಗೆ ಸಂಬಂಧಿಸಿಲ್ಲ. ಆನ್‌ಲೈನ್ ಪೋಕರ್ ಕುರಿತು ಆರ್ಯನ್ ಮತ್ತು ಸ್ನೇಹಿತನ ನಡುವಿನ ವಾಟ್ಸ್‌ಆ್ಯಪ್ ಚಾಟ್‌ಗಳನ್ನು ಎನ್‌ಸಿಬಿ ತಪ್ಪಾಗಿ ಅರ್ಥೈಸುತ್ತಿದೆ ಎಂದು ನಿನ್ನೆ ವಾದಿಸಿದ್ದರು.

ಆರ್ಯನ್ ಪರವಾಗಿ ಹಿರಿಯ ವಕೀಲ ಮತ್ತು ಕೇಂದ್ರದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಮಂಗಳವಾರ ತಮ್ಮ ವಾದವನ್ನು ಮುಕ್ತಾಯಗೊಳಿಸಿದ್ದರು. ಆರ್ಯನ್‌ ಬಂಧನವನ್ನು ರೋಹಟಗಿ ನಿರಂಕುಶ ಎಂದು ಕರೆದ್ದರು.

ಎನ್‌ಸಿಬಿ 23 ವರ್ಷ ವಯಸ್ಸಿನ ಆರ್ಯನ್‌ನಿಂದ ಯಾವುದೇ ಮಾದಕ ದ್ರವ್ಯ ಸೇವನೆಯನ್ನು ತೋರಿಸಲು ವೈದ್ಯಕೀಯ ಪರೀಕ್ಷೆ ನಡೆಸಲಿಲ್ಲ ಎಂದು ಹೇಳಿದ್ದರು. ಅಕ್ಟೋಬರ್‌ 2ರಂದು ಆರ್ಯನ್‌ ಖಾನ್‌ರನ್ನು ಎನ್‌ಸಿಬಿ ಬಂಧಿಸಿದ್ದು, ಅಕ್ಟೋಬರ್‌ 8ರಿಂದ ಆರ್ಯನ್‌ ಜೈಲಿನಲ್ಲೇ ಇದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.