ETV Bharat / sitara

ಕೊರೊನಾದಿಂದ ಸಾವನ್ನಪ್ಪಿದ ಶೂಟರ್ ದಾದಿ ಚಂದ್ರೋ ತೋಮರ್: ಬಾಲಿವುಡ್​ ನಟಿಯರ ಸಂತಾಪ

ಕೊರೊನಾ ಸೋಂಕಿಗೆ ತುತ್ತಾಗಿದ್ದ ಶೂಟರ್ ದಾದಿ ಎಂದು ಜನಪ್ರಿಯವಾಗಿದ್ದ ಉತ್ತರಪ್ರದೇಶದ ಚಂದ್ರೋ ತೋಮರ್ ನಿಧನರಾಗಿದ್ದು, ನಟಿ ತಾಪ್ಸಿ ಪನ್ನು, ಭೂಮಿ ಪಡ್ನೇಕರ್ ಮತ್ತು ಕಂಗನಾ ರಣಾವತ್​ ಸಂತಾಪ ಸೂಚಿಸಿದ್ದಾರೆ.

author img

By

Published : Apr 30, 2021, 7:03 PM IST

tapsi
tapsi

ಹೈದ್ರಾಬಾದ್​: ಶೂಟರ್ ದಾದಿ ಎಂದು ಹೆಸರು ವಾಸಿಯಾಗಿದ್ದ ಚಂದ್ರೋ ತೋಮರ್ ಕೊರೊನಾದಿಂದಾಗಿ ಮೃತಪಟ್ಟಿದ್ದು, ತಾಪ್ಸಿ ಪನ್ನು, ಕಂಗನಾ, ಭೂಮಿ ಪಡ್ನೇಕರ್​ ಸೇರಿ ಅನೇಕ ನಟಿಯರು ಕಂಬನಿ ಮಿಡಿದಿದ್ದಾರೆ.

ಕೋವಿಡ್​ ಸೋಂಕು ಹಿನ್ನೆಲೆ ಚಂದ್ರೋ ತೋಮರ್(89)ಗೆ ಉಸಿರಾಟದ ತೊಂದರೆ ಉಂಟಾದ ಕಾರಣ ಅವರನ್ನು ಮೀರತ್​ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಾಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ಉತ್ತರಪ್ರದೇಶದ ಬಾಗಪತ್‌ಗೆ ಸೇರಿದ ಚಂದ್ರೋ ತೋಮರ್ ಅವರು ತಮ್ಮ 65 ನೇ ವಯಸ್ಸಿನಲ್ಲಿ ಸ್ಪರ್ಧಾತ್ಮಕ ಶೂಟಿಂಗ್ ಪ್ರಾರಂಭಿಸಿದರು. ಅವರು ತಮ್ಮ ವೃತ್ತಿಜೀವನದಲ್ಲಿ 30 ಕ್ಕೂ ಹೆಚ್ಚು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು ಮತ್ತು ಹಲವಾರು ಇತರ ಸ್ಪರ್ಧೆಗಳನ್ನು ಗೆದ್ದರು.

ಅವರ ಜೀವನವು 2019 ರ ಬಾಲಿವುಡ್ ಚಿತ್ರ "ಸಾಂದ್​ ಕಿ ಆಂಕಿ" ಗೆ ಸ್ಫೂರ್ತಿ ನೀಡಿತು, ಇದರಲ್ಲಿ ತಾಪ್ಸಿ ಪನ್ನು ಮತ್ತು ಭೂಮಿ ಪೆಡ್ನೇಕರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಚಂದ್ರೋ ಅವರ ಅತ್ತಿಗೆ ಹೆಸರಾಂತ ಶೂಟರ್ ಪ್ರಕಾಶಿ ತೋಮರ್​ ಬಯೋಪಿಕ್​ ಆಗಿತ್ತು. ಈ ಚಿತ್ರದಲ್ಲಿ ಪ್ರಕಾಶಿ ತೋಮರ್​ ಪಾತ್ರದಲ್ಲಿ ತಾಪ್ಸಿ ಪನ್ನು ಮತ್ತು ಚಂದ್ರೋ ತೋಮರ್ ಪಾತ್ರದಲ್ಲಿ ಭೂಮಿ ಪಡ್ನೇಕರ್ ನಟಿಸಿದ್ದರು. ಹೀಗಾಗಿ ತೀವ್ರ ದುಃಖ ಹೊರಹಾಕಿರುವ ಭುಮಿ, ಸೋಶಿಯಲ್​ ಮೀಡಿಯಾದಲ್ಲಿ ಮೃತ ಶೂಟರ್​ಗೆ ಸಂತಾಪ ಸೂಚಿಸಿದ್ದಾರೆ. ಇತ್ತ ನಟಿ ಕಂಗನಾ ರಾಣಾವತ್​ ಕೂಡ ಮೃತ ಶೂಟರ್ ದಾದಿ ಚಂದ್ರೋ ತೋಮರ್​ಗೆ ಸಂತಾಪ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.