ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಹಲವು ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ.
ಎಂ.ಎಸ್. ಧೋನಿ ಸಿನಿಮಾ ನಟ ಜೂನ್ 3 ರಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದ ಫೋಟೋ ಮತ್ತು ಅವರು ಬರೆದುಕೊಂಡಿದ್ದ ಸಾಲುಗಳು ಅವರನ್ನು ಯಾವುದೋ ನೋವು ಕಾಡುತ್ತಿತ್ತಾ ಎಂಬ ಅನುಮಾನ ಮೂಡಿಸಿವೆ.
- " class="align-text-top noRightClick twitterSection" data="
">
ನಿಧನರಾಗಿರುವ ತಾಯಿಯ ಫೋಟೋದೊಂದಿಗೆ ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ್ದ ಸುಶಾಂತ್ ಸಿಂಗ್, ಕಣ್ಣೀರಿನಿಂದಾಗಿ ಹಿಂದಿನದೆಲ್ಲ ಮುಸುಕಾಗಿದೆ.. ಅಂತ್ಯಕಾಣದ ಕನಸುಗಳು ನಗುವನ್ನು ಅರಳಿಸುತ್ತಿವೆ. ಬದುಕು ತುಂಬಾ ಕ್ಷಣಿಕ. ಈ ಎರಡರ ಮಧ್ಯೆ ಮಾತುಕತೆ ನಡೆಯುತ್ತಿದೆ ಎಂದು ಕಾವ್ಯಾತ್ಮಕವಾಗಿ ಸುಶಾಂತ್ ಬರೆದುಕೊಂಡಿದ್ದರು.
ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿರುವ ಬೆನ್ನಲ್ಲೇ ಇನ್ಸ್ಟಾಗ್ರಾಮ್ ಪೋಸ್ಟ್ನ ಕಾವ್ಯಾತ್ಮಕ ಬರಹ ವೈರಲ್ ಆಗಿದೆ. ಇದನ್ನು ನೋಡಿದರೆ ನಟ ಸುಶಾಂತ್ ತಮ್ಮ ಸಾವಿನ ಸುಳಿವನ್ನು ಮೊದಲೇ ನೀಡಿದ್ದರಾ ಎಂಬ ಅನುಮಾನ ವ್ಯಕ್ತವಾಗ್ತಿದೆ.