ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದ್ದು, ದಿನಕ್ಕೊಬ್ಬರನ್ನು ವಿಚಾರಣೆ ಮಾಡಿ ಮಾಹಿತಿ ಕಲೆ ಹಾಕುತ್ತಿದೆ.
ಇದೀಗ ಸುಶಾಂತ್ ಸಿಂಗ್ ಮತ್ತು ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನಲ್ಲಿ ದಿಶಾ ಕೆಲಸ ಮಾಡುತ್ತಿದ್ದ ಕ್ವಾನ್ ಟ್ಯಾಲೆಂಟ್ ಕಂಪನಿಯ ಸಹ ವ್ಯವಸ್ಥಾಪಕ ಜಯ ಶಾ ಪಾತ್ರವಿರಬಹುದು ಎಂದು ಹೇಳಲಾಗ್ತಿದೆ. ಜಯ ಶಾ ಮತ್ತು ದಿಶಾ ಸಾಲಿಯಾನ್ ಕ್ವಾನ್ ಟ್ಯಾಲೆಂಟ್ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು.
ಜಯ ಶಾ 2009 ರಲ್ಲಿ ಕ್ವಾನ್ ಕಂಪನಿಗೆ ಸೇರಿದ್ದರು, ದಿಶಾ 2008ರಲ್ಲಿ ಕ್ವಾನ್ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. 2019 ರಲ್ಲಿ ದಿಶಾ ಕ್ವಾನ್ ಕಂಪನಿ ತೊರೆದು ಕಾರ್ನರ್ ಸ್ಟೋನ್ ಸ್ಪೋರ್ಟ್ಸ್ ಮತ್ತು ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು.