ಹೈದರಾಬಾದ್ : ಟೆಲಿವಿಷನ್ ಸ್ಟಾರ್ ಸಿದ್ದಾರ್ಥ್ ಶುಕ್ಲಾ ಅಕಾಲಿಕ ಮರಣ ದೇಶದ ಜನತೆ ಶಾಕ್ಗೆ ಒಳಗಾಗುವಂತೆ ಮಾಡಿದೆ. 40 ವರ್ಷದ ನಟ ಹೃದಯಾಘಾತದಿಂದ ಮೃತಪಟ್ಟಿದ್ದು, ಇಂದು ಅವರ ಅಂತ್ಯಸಂಸ್ಕಾರ ನೆರವೇರಿದೆ.
ಮರಣೋತ್ತರ ಪರೀಕ್ಷೆಯ ನಂತರ ಅವರ ಮುಂಬೈ ನಿವಾಸಕ್ಕೆ ಮೃತದೇಹವನ್ನ ತರಲಾಗಿತ್ತು. ಈ ವೇಳೆ ಬಾಲಿವುಡ್ನ ಹಲವು ನಟರು ಅಂತಿಮ ನಮನ ಸಲ್ಲಿಸಿದ್ದಾರೆ. ಅಂತಿಮ ವಿಧಿವಿಧಾನ ನೆರವೇರಿಸಿದ ಬಳಿಕ ಮುಂಬೈನ ಓಶಿವಾರಾ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿದೆ.
- " class="align-text-top noRightClick twitterSection" data="
">
ಮೂಲಗಳ ಪ್ರಕಾರ ನಟನ ಅಂತ್ಯ ಸಂಸ್ಕಾರ ಪ್ರಕ್ರಿಯೆ ಬ್ರಹ್ಮಕುಮಾರಿ ಚಿತಾಗಾರದಲ್ಲಿ ನಡೆಯಬೇಕಿತ್ತು. ಆದರೆ, ಅಲ್ಲಿ ಅನುಮತಿ ಸಿಗದ ಹಿನ್ನೆಲೆ ಓಶಿವಾರಾದಲ್ಲಿ ನಡೆಸಲಾಗಿದೆ ಎನ್ನಲಾಗ್ತಿದೆ. ಬಿಗ್ಬಾಸ್ 13ರ ವಿನ್ನರ್ ಆಗಿದ್ದ ಶುಕ್ಲಾ ಬಾಲಿಕ ವಧು ಟಿವಿ ಸೀರಿಯಲ್ನಿಂದ ಹೆಚ್ಚು ಜನಪ್ರಿಯತೆ ಗಳಿಸಿದ್ದರು.