ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ತಮಗೆ ಬಂದ ಹಾಲಿವುಡ್ ಅವಕಾಶವನ್ನು ತಿರಸ್ಕರಿಸಿದ ಬಗ್ಗೆ ರಿವೀಲ್ ಮಾಡಿದ್ದಾರೆ. ಎಲ್ಲರಂತೆ ನನಗೂ ಹಾಲಿವುಡ್ ಅವಕಾಶದ ಬಗ್ಗೆ ಅಸಮಾಧಾನವಿತ್ತು. ಆದರೆ, ಅವಕಾಶ ಹುಡುಕಿಕೊಂಡು ಬಂದಾಗ ನಾನೇ ಅದನ್ನು ತಿರಸ್ಕರಿದೆ ಎಂದು ಅದಕ್ಕೆ ಕಾರಣವನ್ನೂ ಸಹ ನೀಡಿದ್ದಾರೆ.
![Shilpa Shetty claims she refused 'major stuff even in Hollywood'. Read why](https://etvbharatimages.akamaized.net/etvbharat/prod-images/165597739_452877449260951_7358079029713965016_n_0705newsroom_1620381051_183.jpg)
ಇದನ್ನೂ ಓದಿ: ‘ಗುಡ್ ಬೈ’ ಪಾರ್ಟಿಯಲ್ಲಿ ಬಿಗ್ ಬಿ ಬೀಟ್ಗೆ ಕುಣಿದು ಕುಪ್ಪಳಿಸಿದ ರಶ್ಮಿಕಾ ಮಂದಣ್ಣ!
ಹಾಲಿವುಡ್ ನನ್ನನ್ನು ಮುಂಬೈಗೆ ಹುಡುಕೊಂಡು ಬಂದಿದ್ದು ನಿಜ. ಲಾಸ್ ಏಂಜಲೀಸ್ನಿಂದ ಬಂದ ಅವಕಾಶವನ್ನು ನಿರಾಕರಿಸುವುದು ಅಷ್ಟು ಸಲಭದ ಕೆಲಸವಾಗಿರಲಿಲ್ಲ. ಆದರೂ ನನಗೆ ಬಂದ ಅವಕಾಶವನ್ನು ನಾನು ನಿರಾಕರಿಸಿದೆ.
- " class="align-text-top noRightClick twitterSection" data="
">
ಮುಂಬೈ ಬಿಟ್ಟು ಲಾಸ್ ಏಂಜಲೀಸ್ನಲ್ಲಿ ನೆಲೆಸುವುದೆಂದರೆ ಅದು ಕಷ್ಟಸಾಧ್ಯವಾಗಿತ್ತು. ಈ ಬಗ್ಗೆ ನನ್ನ ಮಗನಿಗೂ ಅಸಮಾಧಾನವಿತ್ತು. ಹಾಲಿವುಡ್ ಅವಕಾಶಕ್ಕಾಗಿ ನನ್ನ ತಾಯಿ ಅಮೆರಿಕಕ್ಕೆ ತೆರಳುವುದು ಇಷ್ಟವಿಲ್ಲ ಎಂದಾಗ ನಾನು ಹಿಂದೆ ಸರಿಯಬೇಕಾಯಿತು. ಜೊತೆಗೆ ಮುಂಬೈ ವಾತಾವರಣನ್ನು ಕಳೆದುಕೊಳ್ಳುವುದು ನನಗೂ ಇಷ್ಟವಿರಲಿಲ್ಲ.
- " class="align-text-top noRightClick twitterSection" data="
">
ಹಾಗಾಗಿ ಕಳೆದುಹೋದ ಉತ್ತಮ ಅವಕಾಶಗಳ ಬಗ್ಗೆ ಚಿಂತಿಸಿ ಉಪಯೋಗವಿಲ್ಲವೆಂದು ತಿಳಿಯಿತು. ಅಲ್ಲದೇ ನನಗೆ ಇಲ್ಲಿ ಯಾವುದೂ ಕೊರತೆ ಅನ್ನಿಸಿಲ್ಲ. ನಾನು ನನ್ನ ಮಕ್ಕಳು ಹಾಗೂ ಕುಟುಂಬದೊಂದಿಗೆ ಸಂತೋಷವಾಗಿದ್ದೇನೆ. ಬಂದ ಅವಕಾಶ (ಟಿವಿ ಶೋ)ಗಳಲ್ಲಿ ಖುಷಿಯಾಗಿದ್ದೇನೆ. ನನಗೆ ಬೇಕಾದುದನ್ನು ನಾನು ಪಡೆದುಕೊಂಡಿದ್ದೇನೆ. ಇಲ್ಲಿಯೇ ಇದ್ದು ಕೆಲಸ ಮಾಡುವುದೆಂದರೆ ನನಗೆ ಇಷ್ಟ ಎಂದು ಬಾಲಿವುಡ್ ಚಿತ್ರರಂಗದ ಬಗ್ಗೆ ಇದ್ದ ನಂಟನ್ನು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕೇಸ್ ಪೊಲೀಸ್ ಠಾಣೆಯಲ್ಲಿದೆ, ಅಲ್ಲಿಯೇ ಇತ್ಯರ್ಥವಾಗಲಿದೆ: ನಟ ದರ್ಶನ್
ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾದ ಶಿಲ್ಪಾ ಶೆಟ್ಟಿಗೆ ಮಗ ವಿಯಾನ್ (9 ವರ್ಷು) ಮತ್ತು ಮಗಳು ಸಮಿಶಾ ಎಂಬ ಇಬ್ಬರು ಮಕ್ಕಳಿದ್ದು ಈಗ ಮುಂಬೈನಲ್ಲೇ ನೆಲೆಸಿದ್ದಾರೆ. 14 ವರ್ಷಗಳಿಂದ ಸಿನಿಮಾ ರಂಗದಿಂದ ದೂರವೇ ಉಳಿದುಕೊಂಡಿರುವ ಶಿಲ್ಪಾ ಶೆಟ್ಟಿ, ಇತ್ತೀಚೆಗೆ ಕೆಲವು ಕಿರುತೆರೆ (ಟಿವಿ ಶೋ) ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಮನೆ ಮಾತಾಗಿದ್ದಾರೆ. ಈ ನಡುವೆ ಕೆಲವು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಕಾಣಿಸಿಕೊಂಡಿದ್ದಾರೆ.
![Shilpa Shetty claims she refused 'major stuff even in Hollywood'. Read why](https://etvbharatimages.akamaized.net/etvbharat/prod-images/02:50:50:1621156850_sdf_1605newsroom_1621153193_46.jpg)