ಮುಂಬೈ: ಬಾಲಿವುಡ್ ನಟಿ ಶಿಲ್ಪ ಶೆಟ್ಟಿ ಅವರ ಸಹೋದರಿ ಶಮಿತಾ ಶೆಟ್ಟಿ 43ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಜನ್ಮ ದಿನವನ್ನು ಬಿಗ್ ಬಾಸ್ನಲ್ಲಿ ಪರಿಚಯವಾಗಿದ್ದ ಸ್ನೇಹಿತ ರಾಕೇಶ್ ಬಾಪಟ್ ಜೊತೆ ಸೇರಿ ಆಚರಣೆ ಮಾಡಿದ್ದಾರೆ. ರಾಕೇಶ್ ಹಾಗೂ ಶಮಿತಾ ಜತೆಯಾಗಿ ಕಾಣಿಸಿಕೊಂಡಿರುವುದಲ್ಲದೇ ಜನ್ಮದಿನದ ವಿಶೇಷ ಡೇಟ್ಗೂ ಹೋಗಿದ್ದಾರೆ.
ಈ ಸಂದರ್ಭದ ಚಿತ್ರಗಳನ್ನು ರಾಕೇಶ್ ಬಾಪಟ್ ಹಂಚಿಕೊಂಡಿದ್ದು, ವೈರಲ್ ಆಗಿವೆ. ವಿಶೇಷವೆಂದರೆ ರಾಕೇಶ್, ಶಮಿತಾರನ್ನು ಎತ್ತಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಇದಲ್ಲದೇ ಈರ್ವರೂ ಆಲಂಗಿಸಿಕೊಂಡು, ಕಿಸ್ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಝಲಕ್ ಇಲ್ಲಿದೆ ನೋಡಿ.